ಸುದ್ದಿ

KSRTC ಕೇಂದ್ರ ಕಚೇರಿಯಲ್ಲಿ ಅದ್ದೂರಿ ಕನ್ನಡ ರಾಜ್ಯೋತ್ಸವ

Share It


ಬೆಂಗಳೂರು: ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ನಿಗಮದ ಕೇಂದ್ರ ಕಛೇರಿಯಲ್ಲಿ ೭೦ ನೇ ಕನ್ನಡ ರಾಜ್ಯೋತ್ಸವ ಕಾರ್ಯಕ್ರಮವನ್ನು ಅರ್ಥಪೂರ್ಣವಾಗಿ ಆಚರಿಸಲಾಯಿತು.

ಈ‌ ಸಂದರ್ಭದಲ್ಲಿ ಸಮಸ್ತ ಅಧಿಕಾರಿ/ ಸಿಬ್ಬಂದಿಗಳು ಹಾಗೂ ಪ್ರಯಾಣಿಕರಿಗೆ ನಿಗಮದ ವ್ಯವಸ್ಥಾಪಕ ನಿರ್ದೇಶಕರಾದ ಅಕ್ರಂ‌ ಪಾಷ‌ ಅವರು, ಕನ್ನಡ ರಾಜ್ಯೋತ್ಸವದ ಶುಭಾಶಯಗಳನ್ನು ತಿಳಿಸಿದರು.

ಈ ಸಂದರ್ಭದಲ್ಲಿ ಮಾತನಾಡಿದ ವ್ಯವಸ್ಥಾಪಕ ನಿರ್ದೇಶಕರು, ನಮ್ಮ ಚಾಲನಾ ಸಿಬ್ಬಂದಿ ಬಹಳ ಸಂತೋಷದಿಂದ ರಾಜ್ಯೋತ್ಸವವನ್ನು ಆಚರಿಸುತ್ತಾರೆ. ಕರ್ನಾಟಕ ರಾಜ್ಯದ ಇತಿಹಾಸವನ್ನು ವಿವರಿಸುತ್ತಾ ಮಾತನಾಡಿದ ಅವರು ಮೈಸೂರು ರಾಜ್ಯದಿಂದ ಕರ್ನಾಟಕವಾಗಿ ಹೆಸರಿಸಲಾದ ನಾಡು ಕರ್ನಾಟಕ. ಆಲೂರು ವೆಂಕಟರಾಯರು, ಕುವೆಂಪು, ಅನಕೃ, ಇತರೆ ಮಹನೀಯರುಗಳು ಕನ್ನಡ ನಾಡಿಗಾಗಿ ದುಡಿದಿದ್ದಾರೆ ಎಂದರು.

ಕನ್ನಡ ನಾಡು ನುಡಿಯನ್ನು ಗೌರವಿಸಿ, ಉಳಿಸಿ, ಬೆಳೆಸುವ ಸಂಕಲ್ಪ ಪ್ರತಿಯೊಬ್ಬರಲ್ಲಿಯೂ ಮೂಡಬೇಕು. ಎಲ್ಲರನ್ನೂ ಪ್ರೋತ್ಸಾಹಿಸಿ ಭಾಷೆಯನ್ನು ಕಲಿಯುವಂತೆ ಮಾತನಾಡಬೇಕು. ಕನ್ನಡ ಭಾಷೆ, ಕಲೆ, ಸಂಸ್ಕೃತಿ ಮತ್ತು ನೆಲದ ಬಗ್ಗೆ ಹೆಮ್ಮೆ ಮತ್ತು ಗೌರವವಿರಲಿ ಎಂದು ತಿಳಿಸಿದರು.

ಕಾರ್ಯಕ್ರಮದಲ್ಲಿ ಅಧಿಕಾರಿಗಳು ಮತ್ತು ಸಿಬ್ಬಂದಿ ಹಾಜರಿದ್ದರು.


Share It

You cannot copy content of this page