ದೆಹಲಿಯಲ್ಲಿ ವಿಪರೀತ ವಾಯುಮಾಲಿನ್ಯ: ಶಾಲೆಗಳಿಗೆ ಆನ್ ಲೈನ್ ಪಾಠ

Share It

ನವದೆಹಲಿ: ದೆಹಲಿಯಲ್ಲಿ ವಾಯುಮಾಲಿನ್ಯದ ಪ್ರಮಾಣ ವಿಪರೀತ ಹೆಚ್ಚಾಗಿದ್ದು, ಐದನೇ ತರಗತಿವರೆಗೆ ಶಾಲೆಗಳಿಗೆ ರಜೆ ಘೋಷಣೆ ಮಾಡಿರುವ ಸರಕಾರ ಆನ್ ಲೈನ್ ನಲ್ಲಿ ಪಾಠಕ್ಕೆ ಮಾತ್ರವೇ ಸೀಮಿತಗೊಳಿಸಿದೆ.

ದೆಹಲಿ ಸರಕಾರ ಈ ಕುರಿತು ಸೋಮವಾರ ಅಧಿಕೃತ ಆದೇಶ ಹೊರಡಿಸಿದ್ದು, ಈ ಆದೇಶ ಎಲ್ಲ ಸರಕಾರ ಮತ್ತು ಅನುದಾನಿತ ಖಾಸಗಿ ಶಾಲೆಗಳಿಗೆ ಅನ್ವಯಿಸಲಿದೆ. ಆರನೇ ತರಗತಿ ನಂತರದ ಶಾಲೆಗಳು ಈ ಹಿಂದಿನ ಆದೇಶದಂತೆ ಒಂದು ದಿನ ಆನ್ ಲೈನ್ ಹಾಗೂ ಮತ್ತೊಂದು ದಿನ ನೇರ ತರಗತಿಗಳು ನಡೆಯಲಿವೆ.

ವಾಯುಮಾಲಿನ್ಯದ ಗುಣಮಟ್ಟ ವಿಪರೀತ ಕೆಟ್ಟಿರುವ ಹಿನ್ನೆಲೆಯಲ್ಲಿ ದೆಹಲಿ ಸರಕಾರ ಈ ತೀರ್ಮಾನ ಕೈಗೊಂಡಿದೆ. ವಾಯುಮಾಲಿನ್ಯ ಸುಧಾರಿಸಿದ ನಂತರದ AQI ವರದಿ ಆಧರಿಸಿ ಮುಂದಿನ ತೀರ್ಮಾನ ಕೈಗೊಳ್ಳಲಾಗುತ್ತದೆ.


Share It
Previous post

ಸುದೀಪ್ ಆಪ್ತ ಮಂಜುಗೆ ಇರುವ ಸೌಲಭ್ಯ ಗಿಲ್ಲಿಗ್ಯಾಕಿಲ್ಲ?: ಸುದೀಪ್ ವಿರುದ್ಧ ನೆಟ್ಟಿಗರ ಆಕ್ರೋಶ

Next post

ದಟ್ಟಮಂಜಿನ ಪರಿಣಾಮ ದೆಹಲಿ- ಆಗ್ರಾ ಎಕ್ಸ್‌ಪ್ರೆಸ್‌ ಹೈವೆಯಲ್ಲಿ ಅಪಘಾತ;3 ಕಾರು, 7 ಬಸ್ ಗಳಿಗೆ ಬೆಂಕಿ: ನಾಲ್ವರು ಸಾವು

You May Have Missed

You cannot copy content of this page