ರಾಯಪುರ: ಇಶಾನ್ ಕಿಶನ್ ಮತ್ತು ನಾಯಕ ಸೂರ್ಯಕುಮಾರ್ ಯಾದವ್ ಅವರ ಭರ್ಜರಿ ಬ್ಯಾಟಿಂಗ್ ನೆರವಿನಿಂದ ಭಾರತ ತಂಡ ಎರಡನೇ ಟಿ-20 ಪಂದ್ಯದಲ್ಲಿ ಭರ್ಜರಿ ಜಯ ಗಳಿಸಿದೆ.
ಮೊದಲು ಬ್ಯಾಟ್ ಮಾಡಿದ ನ್ಯೂಜಿಲೆಂಡ್ 209 ರನ್ ಗಳ ಗುರಿಯನ್ನು ನೀಡಿತ್ತು. ಗುರೊಯನ್ಮು ಬೆನ್ನತ್ತಿದ್ದ ಭಾರತ ಮೊದಲ ಎರಡು ವಿಕೆಟ್ ಗಳನ್ನು ಬೇಗನೆ ಕಳೆದುಕೊಂಡು ಆತಂಕದಲ್ಲಿತ್ತು. ಈ ವೇಳೆ ಕ್ರೀಸ್ ಗಿಳಿದ ಇಶಾನ್ ಕಿಶನ್ ಅತ್ಯುತ್ತಮ ಕಮ್ ಬ್ಯಾಕ್ ಇನ್ನಿಂಗ್ಸ್ ಆಡಿದರು.
32 ಎಸೆತಗಳಲ್ಲಿ 76 ರನ್‌ಗಳ ಭರ್ಜರಿ ಬ್ಯಾಟಿಂಗ್ ಮೂಲಕ ಗೆಲವನ್ನು ಹತ್ತಿರಕ್ಕೆ ತಂದು ನಿಲ್ಲಿಸಿದರು. ಅವರ ಜತೆಗೂಡಿದ ಸೂರ್ಯಕುಮಾರ್ ಒಂದೂವರೆ ವರ್ಷದ ನಂತರ ತಮ್ಮ ಮೊದಲ ಅರ್ಧಶತಕ ಗಳಿಸಿದರು. ಸೂರ್ಯ 32 ಎಸೆತಗಳಲ್ಲಿ82 ರನ್ ಗಳಿಸಿ ಭಾರತಕ್ಕೆ ಸುಲಭದ ಗೆಲುವು ತಂದುಕೊಟ್ಟರು.
ಶಿವಂ ದುಬೈ 36 ರನ್ ಗಳಿಸಿ ಸೂರ್ಯಗೆ ಸಾಥ್ ನೀಡಿದರು. ಸಂಜು ಸಾಮ್ಸನ್ ಮತ್ತು ಅಭಿಷೇಕ್ ಶರ್ಮಾ ಬ್ಯಾಟಿಂಗ್ ವೈಫಲ್ಯ ಅನುಭವಿಸಿದರು. ನ್ಯೂಜಿಲೆಂಡ್ ಪರವಾಗಿ ರಚಿನ್ ರವೀಂದ್ರ ಮತ್ತು ಸ್ಯಾಂಟ್ನರ್ ಉತ್ತಮ ಬ್ಯಾಟಿಂಗ್ ನಡೆಸಿದ್ದರು. ಆದರೆ, ಯಾರಿಂದಲೂ ಅರ್ಧಶತಕ ದಾಖಲಾಗಲಿಲ್ಲ.

