ಬೆಂಗಳೂರು: ಸಹನಟಿಯ ಮೇಲೆ ಅತ್ಯಾಚಾರ ನಡೆಸಿದ ಆರೋಪದಲ್ಲಿ ಬಂಧಿತನಾಗಿರುವ ಕಾಮಿಡಿ ಕಿಲಾಡಿಗಳು ಖ್ಯಾತಿಯ ನಟ ಮಡೆನೂರು ಮನು ಇದೀಗ ಆಡಿಯೋ ಮೂಲಕ ಹೊಸ ಬಾಂಬ್ ಸಿಡಿಸಿದ್ದಾರೆ.
ಮಡೆನೂರು ಮನು ತನ್ನ ಮೇಲೆ ಅತ್ಯಾಚಾರ ನಡೆಸಿ, ನಂತರ ನನಗೆ ತಾಳಿ ಕಟ್ಟಿದ್ದ ಎಂದು ಕಾಮಿಡಿ ಕಿಲಾಡಿಗಳು ಕಾರ್ಯಕ್ರಮದಿಂದಲೇ ಪ್ರಸಿದ್ಧಿಗೆ ಬಂದಿದ್ದ ನಟಿ ಮಿಂಚು ದೂರು ನೀಡಿದ್ದರು. ಹೀಗಾಗಿ, ಪೊಲೀಸರು ಮಡೆನೂರು ಮನು ಬಂಧಿಸಿದ್ದಾರೆ. ಇದೀಗ ಮಡೆನೂರು ಮನು ಆಕೆ ಙ್ನ ಹೆಂಡತಿ ಎನ್ನುವ ಮೂಲಕ ಪ್ರಕರಣಕ್ಕಡ ಟ್ವಿಸ್ಟ್ ಕೊಟ್ಟಿದ್ದಾರೆ.