ಅಪರಾಧ ಸುದ್ದಿ

SHOCKING NEWS : 9ನೇ ತರಗತಿ ಹುಡುಗನ ಇರಿದು ಕೊಂದ 6ನೇ ತರಗತಿ ಬಾಲಕ

Share It

ಹುಬ್ಬಳ್ಳಿ:ಯಲ್ಲಿ ಬೆಚ್ಚಿ ಬೀಳಿಸೋ ಘಟನೆ ನಡೆದಿದ್ದು, ಒಂದೇ ತಟ್ಟೆಯಲ್ಲಿ ಊಟ ಮಾಡಿ, ಒಬ್ಬರನ್ನು ಒಬ್ಬರು ಬಿಟ್ಟಿರಲಾರದ ಸ್ನೇಹಿತರ ಮಧ್ಯ ಗಲಾಟೆ ಆಗಿದೆ. 13 ವರ್ಷದ ಅಪ್ರಾಪ್ತ ಬಾಲಕ ತನ್ನ ಮನೆ ಮುಂದೆಯೇ ಇರೋ ತನ್ನ ಸ್ನೇಹಿತನಾಗಿದ್ದ 15 ವರ್ಷದ ಬಾಲಕನನ್ನು ಚಾಕುವಿನಿಂದ ಇರಿದು ಕೊಲೆಗೈದಿರುವ ಘಟನೆ ಹುಬ್ಬಳ್ಳಿ ನಗರದ ಗುರುಸಿದ್ದೇಶ್ವರ ನಗರದಲ್ಲಿ ನಡೆದಿದೆ.

ನಿನ್ನೆ ಸಂಜೆ 7 ಗಂಟೆಗೆ ಈ ಒಂದು ಘಟನೆ ನಡೆದಿದ್ದು, ಗುರುಸಿದ್ದೇಶ್ವರ ನಗರದ ನಿವಾಸಿಯಾಗಿರೋ ಚೇತನ್ ರಕ್ಕಸಗಿ (15) ಕೊಲೆಯಾದ ಬಾಲಕ. ಇನ್ನು ಕೊಲೆ ಮಾಡಿದ್ದು, ಆತನ ಮನೆ ಮುಂದೆಯೇ ಇರುವ ಗೆಳೆಯ ಹದಿಮೂರು ವರ್ಷದ ಬಾಲಕ ಎಂದು ತಿಳಿದು ಬಂದಿದೆ. ಇನ್ನು ಕೊಲೆಯಾದ ಚೇತನ್ ಈಗಷ್ಟೇ ಒಂಬತ್ತನೇ ತರಗತಿ ಪಾಸ್ ಆಗಿದ್ದ. ಕೊಲೆ ಮಾಡಿದ ಬಾಲಕ ಆರನೇ ತರಗತಿ ಉತ್ತೀರ್ಣನಾಗಿದ್ದು, ಇಬ್ಬರು ಎದುರು ಬದುರು ಮನೆಯ ಸ್ನೇಹಿತರು ಎನ್ನಲಾಗಿದೆ.

ನಿನ್ನೆ ಸಂಜೆ 7 ಗಂಟೆ ಸಮಯದಲ್ಲಿ ಮನೆಯಿಂದ ಚಾಕುತಂದು, ಚೇತನ್ ನ ಹೊಟ್ಟೆಯ ಎಡಬಾಗದಲ್ಲಿ ಇರದಿದ್ದಾನೆ. ಚಾಕು ಇರಿಯುತ್ತಿದ್ದಂತೆ ಚೇತನ್ ಕುಸಿದು ಬಿದ್ದಿದ್ದಾನೆ. ಮಕ್ಕಳೆಲ್ಲರು ಚೀರುತ್ತಿದ್ದಂತೆ, ಕೊಲೆ ಮಾಡಿದ ಬಾಲಕನ ತಾಯಿ ಓಡಿ ಬಂದು, ಚೇತನ ನೆರವಿಗೆ ಬಂದಿದ್ದಾರೆ. ಕೂಡಲೇ ಚೇತನ್ ನನ್ನು, ಕೊಲೆ ಮಾಡಿದ ಬಾಲಕನ ತಾಯಿಯೇ ಕರೆದುಕೊಂಡು ಕಿಮ್ಸ್ ಆಸ್ಪತ್ರೆಗೆ ಬಂದಿದ್ದಾರೆ. ಆದರೆ ಚೇತನ್ ಆಗಲೇ ಉಸಿರು ಚೆಲ್ಲಿದ್ದ. ಮಾಹಿತಿ ತಿಳಿಯುತ್ತಿದ್ದಂತೆ ಕಿಮ್ಸ್ ಗೆ ಆಗಮಿಸಿದ ನಗರ ಪೊಲೀಸ್ ಆಯುಕ್ತ ಎನ್ ಶಶಿಕುಮಾರ್, ಪರಿಶೀಲನೆ ನಡೆಸಿದ್ದು, ಕೊಲೆಯಾದ ಬಾಲಕನ ಕುಟುಂಬದವರನ್ನು ಸಮಾಧಾನ ಮಾಡಿದರು.


Share It

You cannot copy content of this page