ಬೆಂಗಳೂರು: ಕೆ.ಎಸ್. ಆರ್.ಟಿ.ಸಿ ಗೆ 4 ರಾಷ್ಟ್ರೀಯ ಬಿಸಿನೆಸ್ ಅವಾರ್ಡ್ ಫಾರ್ ಲೀಡರ್ಶಿಪ್ & ಎಕ್ಸಲೆನ್ಸಿ ಪ್ರಶಸ್ತಿ-2025 ಲಭಿಸಿರುತ್ತದೆ.
ಕೆ.ಎಸ್.ಆರ್.ಟಿ.ಸಿ ಯು ಕೈಗೊಂಡಿರುವ ಅತ್ಯುತ್ತಮ ಪ್ರಯಾಣಿಕರ ಸ್ನೇಹಿ ಹಾಗೂ ಮಾಹಿತಿ ತಂತ್ರಜ್ಞಾನದ ಉಪಕ್ರಮಗಳಿಗಾಗಿ 4 ರಾಷ್ಟ್ರೀಯ ಬಿಸಿನೆಸ್ ಅವಾರ್ಡ್ ಫಾರ್ ಲೀಡರ್ಶಿಪ್ & ಎಕ್ಸಲೆನ್ಸಿ ಪ್ರಶಸ್ತಿಯು ಈ ಕೆಳಕಂಡ ವರ್ಗಗಳಲ್ಲಿ
- Most Best use of Technology
- Most Innovative Company of the year
- Most Customer Friendly Company of the year
- Best Brand Development ಲಭಿಸಿರುತ್ತದೆ.
- ಇಂದು ಮುಂಬಯಿನ ಹೋಟಲ್ ಪಾರ್ಲೆ ಇಂಟರ್ನ್ಯಾಷನಲ್ ನಲ್ಲಿ ನಡೆದ ಪ್ರಶಸ್ತಿ ವಿತರಣಾ ಸಮಾರಂಭದಲ್ಲಿ ಮೋನಾಲಿ ಬಾಗುಲ್, ಸಂಸ್ಥಾಪಕರು ಹಾಗೂ ಮುಖ್ಯ ಕಾರ್ಯ ನಿರ್ವಹಣಾಧಿಕಾರಿ, VE BIZTALK ಮೀಡಿಯಾ, ರವರು ನಿಗಮಕ್ಕೆ ಪ್ರಶಸ್ತಿಗಳನ್ನು ಪ್ರದಾನ ಮಾಡಿದರು.
- ರಾಧ ಎಲ್. ಗುಂಡಳ್ಳಿ, ಉಪ ಉಗ್ರಾಣ ಮತ್ತು ಖರೀದಿ ನಿಯಂತ್ರಕರು ಹಾಗೂ ಅಶೋಕ್ ಕುಮಾರ್, ವಿಭಾಗೀಯ ನಿಯಂತ್ರಣಾಧಿಕಾರಿ, ಚಾಮರಾಜನಗರ ವಿಭಾಗ ರವರು ನಿಗಮದ ಪರವಾಗಿ ಪ್ರಶಸ್ತಿ ಸ್ವೀಕರಿಸಿದರು.