ಕೆಎಸ್‌ಆರ್‌ಟಿಸಿಗೆ ರಾಷ್ಟ್ರೀಯ ಇಕಾನಾಮಿಕ್ ಟೈಮ್ಸ್ 2025 ರ PSU ಲೀಡರ್‌ಶಿಪ್ ಅಂಡ್ ಎಕ್ಸಲೆನ್ಸ್ ಪ್ರಶಸ್ತಿ

Share It

ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ಸಂಸ್ಥೆಯು (KSRTC) ಕೈಗೊಂಡಿರುವ ಬಸ್‌ಗಳ ಬ್ರಾಂಡಿಂಗ್ ಉಪಕ್ರಮಕ್ಕೆ ಬಳಕೆದಾರರ ಅನುಭವವನ್ನು ಹೆಚ್ಚಿಸುವಲ್ಲಿ ಸಾಧನೆಗೈದ ಕಾರಣಕ್ಕಾಗಿ ಇಕಾನಾಮಿಕ್ ಟೈಮ್ಸ್ ಪಿಎಸ್‌ಯು ಲೀಡರ್‌ಶಿಪ್ ಅಂಡ್ ಎಕ್ಸಲೆನ್ಸ್ ಅವಾರ್ಡ್ 2025 ಪುರಸ್ಕಾರ ದೊರಕಿದೆ.

ಈ ಪ್ರಶಸ್ತಿಯನ್ನು ಹೈಯಟ್ ರಿಜೆನ್ಸಿ ಹೋಟೆಲ್, ನವದೆಹಲಿಯಲ್ಲಿ 2025ರ ಜೂನ್ 19ರಂದು ನಡೆದ ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ ನೀಡಲಾಯಿತು.

ಈ ಪುರಸ್ಕಾರವನ್ನು ಶ್ರೀ ಇಂದರ್ ಪಾಲ್ ಸಿಂಗ್ ಸೇಥಿ, ಡೈರೆಕ್ಟರ್ ಜನರಲ್ , ನ್ಯಾಷನಲ್ ಇನ್‌ಫಾರ್ಮೆಟಿಕ್ಸ್ ಸೆಂಟರ್ (NIC), ಭಾರತ ಸರ್ಕಾರ ರವರು ನಿಗಮಕ್ಕೆ ನೀಡಿದರು.

ಈ ಪ್ರಶಸ್ತಿಯನ್ನು ನಿಗಮದ ಪರವಾಗಿ ವೆಂಕಟೇಶ್ ಟಿ, ಮುಖ್ಯ ಕಾನೂನು ಅಧಿಕಾರಿ ಮತ್ತು ಕುತ್ಬುದ್ದೀನ್ ಹವಾಲ್ದಾರ್, ಮುಖ್ಯ ಕಾಮಗಾರಿ ಅಭಿಯಂತರರು, ಕೇಂದ್ರ ಕಚೇರಿ, ಬೆಂಗಳೂರು ಇವರು ಸ್ವೀಕರಿಸಿದರು.


Share It

You May Have Missed

You cannot copy content of this page