ಲಕ್ಷ್ಮೇಶ್ವರ: ಪಕ್ಷದ ಮೂಲಕ ದೇಶದ ಅತ್ಯುನ್ನತ ಹುದ್ದೆಯನ್ನ ಏರಬಹುದು. ಆ ಹುದ್ದೆಗಳು ಮಾಜಿಯಾಗುತ್ತವೆ. ಆದರೆ, ಕಾರ್ಯಕರ್ತರು ಎಂದು ಮಾಜಿ ಆಗುವುದಿಲ್ಲ ಎಂಬ ಸತ್ಯ ಪ್ರತಿಯೊಬ್ಬ ಕಾರ್ಯಕರ್ತನಿಗೂ ಅರ್ಥವಾಗಿರಬೇಕು ಎಂದು ಮಾಜಿ ಸಚಿವ ಶಂಕರ ಪಾಟೀಲಮುನೇನಕೊಪ್ಪ ಹೇಳಿದರು.
ಗದಗ ಜಿಲ್ಲೆಯ ಶಿರಹಟ್ಟಿ ಮಂಡಲ ವ್ಯಾಪ್ತಿಯ ಲಕ್ಷ್ಮೇಶ್ವರ ತಾಲೂಕಿನ ಬಿಜೆಪಿ ಸದಸ್ಯತ್ವ ಅಭಿಯಾನ-2024 ಕಾರ್ಯಕ್ರಮಕ್ಕೆ ಚಾಲನೆ ನೀಡಿ ಅವರು ಮಾತನಾಡುತ್ತಿದ್ದರು.
ನಾನು ಮಾಜಿ ಮಂತ್ರಿಯಾಗಿ ಇಲ್ಲಿಗೆ ಬಂದಿಲ್ಲ. ಸಾಮಾನ್ಯ ಕಾರ್ಯಕರ್ತನಾಗಿ ಬಂದಿದ್ದೇನೆ. ಪಕ್ಷದ ಸದಸ್ಯತ್ವ ಪ್ರತಿ ಮನೆಯಲ್ಲೂ ಇರಬೇಕು. ದೇಶಕ್ಕಾಗಿ ಬಿಜೆಪಿಯ ಅವಶ್ಯಕತೆ ಎಲ್ಲ ಕಡೆಯೂ ಇದೆ ಎಂಬುದನ್ನ ಕಾರ್ಯಕರ್ತರು ಎಲ್ಲರಿಗೂ ಅರ್ಥ ಮಾಡಿಸಬೇಕು. ಯಾವುದೇ ಸಂದರ್ಭದಲ್ಲಿ ನನ್ನ ಅವಶ್ಯಕತೆ ಇದ್ದರೇ, ಅಲ್ಲಿಗೆ ಖುದ್ದು ಬರುತ್ತೇನೆ ಎಂದರು. ವಿಕಶಿತ ಭಾರತ ನಿರ್ಮಾಣದ ಸಾಕಾರಕ್ಕೆ ನಾವು ಎಲ್ಲರೂ ಜೊತೆಯಾಗೋಣ ಎಂದು ಮುನೇನಕೊಪ್ಪ ಹೇಳಿದರು.
ಈ ಸಂದರ್ಭದಲ್ಲಿ ಶಾಸಕ ಚಂದ್ರು ಲಮಾಣಿ, ಜಿಲ್ಲಾಧ್ಯಕ್ಷ ರಾಜು ಕುರಡಗಿ, ಮಂಡಲ ಅಧ್ಯಕ್ಷ ಸುನೀಲ ಮಾನಶೆಟ್ಟರ, ನಗರದ ಘಟಕದ ಅಧ್ಯಕ್ಷ ನವೀನ ಬೆಳ್ಳಹಟ್ಟಿ, ಜಿಲ್ಲಾ ಪ್ರಧಾನ ಕಾರ್ಯದರ್ಶಿ ಪಕ್ಕಿರೇಶ ರಟ್ಟಿಹಳ್ಳಿ, ಜಿಲ್ಲಾ ಮಹಿಳಾ ಮೋರ್ಚಾ ಪ್ರಧಾನ ಕಾರ್ಯದರ್ಶಿ ಅಶ್ವಿನಿ ಅಕ್ಕಲಕೋಟಿ ಹಾಗೂ ಪಕ್ಷದ ಗುರು ಹಿರಿಯರು, ಯುವಕರು ಉಪಸ್ಥಿತರಿದ್ದರು.
