ಆರೋಗ್ಯ ಸುದ್ದಿ

ಎಕ್ಸ್ ಫೈರಿ ಡೇಟ್ ಮುಗಿದ ಔಷಧಿ ನೀಡಿದ ಆಸ್ಪತ್ರೆ; ಹತ್ತು ತಿಂಗಳ ಮಗುವಿನ ಆರೋಗ್ಯ ಗಂಭೀರ

Share It

ಬೆಂಗಳೂರು: ಅವಧಿ ಮುಗಿದ ಔಷಧಿ ನೀಡಿದ ಆಸ್ಪತ್ರೆ ಸಿಬ್ಬಂದಿ ನಿರ್ಲಕ್ಷದಿಂದ ಹತ್ತು ತಿಂಗಳ ಮಗುವಿನ ಆರೋಗ್ಯ ಸ್ಥಿತಿ ಗಂಭೀರವಾಗಿರುವ ಘಟನೆ ರಾಮನಗರ ಜಿಲ್ಲೆಯಲ್ಲಿ ನಡೆದಿದೆ.

ಜಿಲ್ಲೆಯ ಲಕ್ಕೋಜನಹಳ್ಳಿ ಗ್ರಾಮದ ದಂಪತಿಯ ಮಗು ಧನ್ವಿತ್ ನನ್ನು ಕಳೆದ ಒಂದು ವಾರದ ಹಿಂದೆ ರಾಮನಗರದ ಶ್ರೀದೇವಿ ಆಸ್ಪತ್ರೆಯಲ್ಲಿ ತೋರಿಸಲಾಗಿತ್ತು. ಸಾಮಾನ್ಯ ಶೀತಕ್ಕೆ ಚಿಕಿತ್ಸೆ ಪಡೆಯಲಾಗಿತ್ತು.

ಆಗ ಶೀತದ ಸಿರಪ್ ವೊಂದನ್ನು ವೈದ್ಯರು ಬರೆದುಕೊಟ್ಟಿದ್ದರು. ಮೆಡಿಕಲ್ ಸಿಬ್ಬಂದಿ ಸಿರಪ್ ನೀಡಿ ಕಳಿಸಿದ್ದರು‌. ಅದನ್ನು ಪೋಷಕರು ಮಗುವಿಗೆ ಕುಡಿಸಿದ್ದು, ಗಂಟಲಲ್ಲಿ ಉಣ್ಣು ಸೃಷ್ಟಿಯಾಗಿವೆ‌ ಅನಂತರ ಮಗುವನ್ನು ಮತ್ತೊಂದು ಆಸ್ಪತ್ರೆಗೆ ಕರೆದೊಯ್ಯಲಾಗಿದೆ.

ಮಗುವಿನ ಗಂಟಲಿನ ಉಣ್ಣುಗಳನ್ನು ಪರಿಶೀಲಿಸಿದ ವೈದ್ಯರು ಔಷಧಿಯ ಅಡ್ಡ ಪರಿಣಾಮದಿಂದ ಹೀಗಾಗಿದೆ ಎಂದು ದೃಢಪಡಿಸಿದ್ದಾರೆ. ಹಿಂದೆ ಬಳಸಿದ್ದ ಔಷಧಿ ಪರಿಶೀಲಿಸುವಂತೆ ಸೂಚಿಸಿದ್ದು, ಈ ವೇಳೆ ಸಿರಪ್ ಪರಿಶೀಲನೆ ವೇಳೆ ಅದರ ದಿನಾಂಕ ಮುಗಿದಿರುವುದು ಸ್ಪಷ್ಟವಾಗಿದೆ.

ಔಷಧಿಯ ಅವಧಿ ಜೂನ್ 2024 ರಲ್ಲಿಯೇ ಮುಗಿದಿದ್ದು, ಅದನ್ನು ಪರಿಶೀಲನೆ ಮಾಡದೆ ಮಗುವಿಗೆ ನೀಡಿದ ವೈದ್ಯರು ಮತ್ತು ಸಿಬ್ಬಂದಿಯ ವಿರುದ್ಧ ಪೋಷಕರು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಸೂಕ್ತ ಕ್ರಮಕ್ಕೆ ಆಗ್ರಹಿಸಿ ಪ್ರತಿಭಟನೆ ನಡೆಸಿದ್ದಾರೆ.


Share It

You cannot copy content of this page