ನಿಯಂತ್ರಣ ತಪ್ಪಿ ದೇವಸ್ಥಾನಕ್ಕೆ ನುಗ್ಗಿದ ಕಾರು: ಪ್ರಯಾಣಿಕರಿಗೆ ಗಂಭೀರ ಗಾಯ
ಬೆಳಗಾವಿ : ಖಾನಾಪುರ ತಾಲೂಕು ರಾಮನಗರ ಕುಂಬಾರ್ಡ ಗ್ರಾಮದ ಬಳಿ ಶನಿವಾರ ಬೆಳಗ್ಗೆ 6:00 ಗಂಟೆ ಸುಮಾರಿಗೆ ಕಾರು ರಸ್ತೆ ಬದಿಯ ಸತಿದೇವಿ ದೇವಸ್ಥಾನಕ್ಕೆ ನೇರವಾಗಿ ನುಗ್ಗಿದೆ.
ಇದರಿಂದ ಕಾರಿನಲ್ಲಿದ್ದ ಪ್ರಯಾಣಿಕರಿಗೆ ಗಂಭೀರವಾಗಿ ಗಾಯವಾಗಿದ್ದು ಅವರನ್ನು ಚಿಕಿತ್ಸೆಗೆ ಧಾರವಾಡ ಆಸ್ಪತ್ರೆಗೆ ರವಾನಿಸಲಾಗಿದೆ. ಕಾರಿನಲ್ಲಿ ಚಿಕ್ಕ ಮಗು ಸೇರಿದಂತೆ ಇತರ ಪ್ರಯಾಣಿಕರು ಇದ್ದರು. ಕಾರು ಅಪಘಾತ ಎಷ್ಟು ಭೀಕರವಾಗಿತೆಂದರೆ ದೇಗುಲದ ಕಟ್ಟಡಕ್ಕೆ ತೀವ್ರ ಹಾನಿಯಾಗಿದೆ.
ಅದೃಷ್ಟವಶಾತ್ ಕಾರಿನಲ್ಲಿ ಇದ್ದವರು ಪ್ರಾಣಪಾಯದಿಂದ ಪಾರಾಗಿದ್ದಾರೆ. ಖಾನಾಪುರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಪ್ರಕರಣ ನಡೆದಿದ್ದು ಲೋಂಡಾ ಪೊಲೀಸ್ ಠಾಣೆಯ ಸಿಬ್ಬಂದಿ ಸ್ಥಳಕ್ಕೆ ಆಗಮಿಸಿ ಪಂಚನಾಮೆ ನಡೆಸಿದ್ದಾರೆ.