ಕೃಷಿ ಇಲಾಖೆಯ ವಿವಿಧ ಹುದ್ದೆಗಳ ಅರ್ಜಿ ಸಲ್ಲಿಕೆ ಅವಧಿ ವಿಸ್ತರಣೆ: ಸರಕಾರದಿಂದ ಅಭ್ಯರ್ಥಿಗಳಿಗೆ ಗುಡ್ ನ್ಯೂಸ್

Share It

ಬೆಂಗಳೂರು: ಕೃಷಿ ಇಲಾಖೆಯಲ್ಲಿ ಖಾಲಿಯಿರುವ ವಿವಿಧ ಹುದ್ದೆಗಳ ನೇಮಕಕ್ಕೆ ಕರೆದಿದ್ದ ಅರ್ಜಿ ಸಲ್ಲಿಕೆಯ ಅವಧಿಯನ್ನು ವಿಸ್ತರಣೆ ಮಾಡಿ ಸರಕಾರ ಆದೇಶ ಹೊರಡಿಸಿದೆ.

ಸೆ.20 ರಂದು ಸರಕಾರ ಹೊರಡಿಸಿದ್ದ ಸುತ್ತೋಲೆಯಲ್ಲಿ ಕೃಷಿ ಇಲಾಖೆಯ ಉಳಿಕೆ ಮೂಲ ವೃಂದದ 86 ಅಧಿಕಾರಿಗಳು ಹಾಗೂ 586 ಸಹಾಯಕ ಕೃಷಿ ಅಧಿಕಾರಿಗಳ ಹುದ್ದೆಗೆ ಅರ್ಜಿ ಕರೆಯಲಾಗಿತ್ತು. ಮನವಿ ಮೇರೆಗೆ ಅರ್ಜಿ ಸಲ್ಲಿಕೆ ಅವಧಿಯನ್ನು ಜನವರಿ 3 ರಿಂದ ಫೆ. 1 ರವರೆಗೆ ವಿಸ್ತರಣೆ ಮಾಡಲಾಗಿತ್ತು.

ಇದೀಗ ಕೆಲವು ಅಭ್ಯರ್ಥಿಗಳು ಅರ್ಜಿ ಸಲ್ಲಿಕೆಗೆ ಅವಕಾಶ ಸಿಗುತ್ತಿಲ್ಲ ಎಂಬ ಕುರಿತು ದೂರು ನೀಡಿದ್ದಾರೆ. ಇದಕ್ಕೆ ಕೆಲವು ತಾಂತ್ರಿಕ ಕಾರಣಗಳಿವೆ ಎಂಬ ಬಗ್ಗೆಯೂ ಅಭಿಪ್ರಾಯಗಳು ವ್ಯಕ್ತವಾಗಿವೆ.  ಹೀಗಾಗಿ ಸರಕಾರ ಮತ್ತೊಮ್ಮೆ ಅರ್ಜಿ ಸಲ್ಲಿಕೆ ಅವಧಿಯನ್ನು ವಿಸ್ತರಣೆ ಮಾಡಿ ಆದೇಶ ಮಾಡಿದೆ.

ಆದೇಶದಲ್ಲಿ ಅಭ್ಯರ್ಥಿಗಳು ತಮ್ಮ ಅರ್ಜಿ ಸಲ್ಲಿಸಲು ಫೆ. 5 ರಿಂದ ಫೆ. 15 ರವರೆಗೆ ಕಾಲಾವಕಾಶ ನೀಡಿದೆ. ಉಳಿದಂತೆ ವಿದ್ಯಾರ್ಹತೆ, ವಯೋಮಿತಿ ಸೇರಿದಂತೆ ಬೇರೆ ಯಾವ ನಿಬಂಧನೆಗಳನ್ನು ಬದಲಾಯಿಸಲಾಗಿಲ್ಲ ಎಂದು ಸರಕಾರ ಸುತ್ತೋಲೆಯಲ್ಲಿ ತಿಳಿಸಿವೆ.


Share It
Previous post

‘ಬಿಜೆಪಿ ಅಂದ್ರೆ ಬುರುಡೆ ಜನರ ಪಕ್ಷ : ಅವರ ತಲೆಯಲ್ಲಿ ಮೆದುಳು ಇರೋದೆ ಡೌಟು’ : ರಾಮಲಿಂಗ ರೆಡ್ಡಿ ಕಿಡಿ

Next post

ಟ್ರಂಪ್ ನಮ್ ಫ್ರೆಂಡು ಅಂತೀರಾ…ಈಗ ನೋಡಿ ನಮ್ಮ ದೇಶದವರನ್ನೇ ಹೊರಗೆ ಹಾಕಿದ್ದಾರೆ: ಪ್ರಧಾನಿ ಮೋದಿಗೆ ಕಾಂಗ್ರೆಸ್ ಟಾಂಗ್

You May Have Missed

You cannot copy content of this page