ಕೋಗಿಲು ಲೇಔಟ್ ತೆರವು: ಕೇರಳ ಶಾಸಕರ ನಿಯೋಗ ಭೇಟಿ

Share It

ಬೆಂಗಳೂರು: ಕೋಗಿಲು ಲೇಔಟ್ ಬಳಿಯ ಒತ್ತುವರಿ ತೆರವು ಸ್ಥಳಕ್ಕೆ ಕೇರಳ ಶಾಸಕ ಕೆ.ಟಿ.ಜಲೀಲ್ ಮತ್ತು ತಂಡ ಭೇಟಿ ನೀಡಿ ಸಂತ್ರಸ್ತರ ಜತೆಗೆ ಚರ್ಚೆ ನಡೆಸಿದೆ.

ಫಕೀರ್ ಕಾಲನಿಯಲ್ಲಿನ ಮನೆಗಳ ಧ್ವಂಸವನ್ನು ಬುಲ್ಡೋಜರ್ ಸಂಸ್ಕ್ರತಿ ಎಂದು ಕೇರಳ ಸಿಎಂ ಜರಿದಿದ್ದರು. ಈ ನಡುವೆ ಆ ಜಾಗ ತ್ಯಾಜ್ಯ ಸಂಸ್ಕರಣ ಘಟಕಕ್ಕೆ ಸಂಭಂದಿಸಿದ್ದು ಎಂದು ಕರ್ನಾಟಕ ಸರಕಾರ ಹೇಳಿತ್ತು. ಆದರೂ, ಕರ್ನಾಟಕ ಮತ್ತು ಕೇರಳ ಸರಕಾರಗಳ ನಡುವೆ ಈ ಘಟನೆ ಕಿಚ್ಚು ಹೊತ್ತಿಸಿದೆ.

ಕೇರಳ ಸರಕಾರ ಘಟನೆ ಸಂಬಂಧ ಮಾಹಿತಿ ಪಡೆಯಲು ಶಾಸಕ ಜಲೀಲ್ ನೇತೃತ್ವದ ತಂಡವನ್ನು ಬೆಂಗಳೂರಿಗೆ ಕಳಿಸಿದೆ. ಅವರು ಭೇಟಿ ನೀಡಿ, ಸಂತ್ರಸ್ತರ ಅಳಲು ಕೇಳಿದ್ದಾರೆ. ಸರಕಾರ ಅವರಿಗೆ ಗಂಜಿ ಕೇಂದ್ರ ತೆರೆದಿದ್ದು, ಪರ್ಯಾಯ ವಸತಿ ವ್ಯವಸ್ಥೆಯ ಭರವಸೆ ನೀಡಿದೆ. ಆದರೆ, ಯಾರೊಬ್ಬರೂ ಸ್ಥಳದಿಂದ ಹೋಗುತ್ತಿಲ್ಲ ಎನ್ನಲಾಗಿದೆ.

ಘಟನಾ ಸ್ಥಳಕ್ಕೆ ಮತ್ತೊಬ್ಬ ಕಾಂಗ್ರೆಸ್ ಮಾಜಿ ಸಚಿವ ಸಿ.ಎಂ.ಇಬ್ರಾಹಿಂ ಕೂಡ ಭೇಟಿ ನೀಡಿ, ಸಂತ್ರಸ್ತರ ಜತೆಗೆ ಮಾತುಕತೆ ನಡೆಸಿದರು. ಒಟ್ಟಾರೆ, ಈ ಘಟನೆ ಇದೀಗ ರಾಜಕೀಯ ಹಗ್ಗಜಗ್ಗಾಟಕ್ಕೆ ಕಾರಣವಾಗಿದೆ.


Share It

You May Have Missed

You cannot copy content of this page