ಚೆನೈ : ಗುರುವಾರ ಚೆನೈನ ಎಂ ಚಿದಂಬರಂ ಅಂತರಾಷ್ಟ್ರೀಯ ಕ್ರೀಡಾಂಗಣದಲ್ಲಿ ನಡೆದ ಭಾರತ ಮತ್ತು ಬಾಂಗ್ಲಾದೇಶದ ವಿರುದ್ಧದ ಮೊದಲ ಟೆಸ್ಟ್ ಪಂದ್ಯದಲ್ಲಿ ಆಲ್ ರೌಂಡರ್ ರವಿಚಂದ್ರನ್ ಅಶ್ವಿನ್ ಟೀಮ್ ಇಂಡಿಯದ ಪರವಾಗಿ ಶತಕ ಸಿಡಿಸುವುದರ ಮೂಲಕ ದಾಖಲೆ ನಿರ್ಮಿಸಿದರು.
ಆರಂಭದಲ್ಲೇ ರೋಹಿತ್ ಶರ್ಮ, ಶುಭ್ಮನ್ ಗಿಲ್, ವಿರಾಟ್ ಕೊಹ್ಲಿ ವಿಕೆಟ್ ಕಳೆದುಕೊಂಡು ಸಂಕಷ್ಟದಲ್ಲಿದ್ದ ಟೀಮ್ ಇಂಡಿಯಾಗೆ ರವಿಚಂದ್ರನ್ ಅಶ್ವಿನ್ ರವೀಂದ್ರ ಜಡೇಜಾ ಜತೆ ಸೇರಿ ಆಸರೆಯಾದರು. 8ನೇ ಕ್ರಮಾಂಕದಲ್ಲಿ ಬ್ಯಾಟಿಂಗ್ ಗೆ ಬಂದ ಅಶ್ವಿನ್ ಬರೋಬ್ಬರಿ 2 ಸಿಕ್ಸರ್ 11 ಬೌಂಡರಿ ಸಹಿತ 133 ಬಾಲ್ ಗಳಲ್ಲಿ 113 ರನ್ ಸಿಡಿಸಿ ಮಿಂಚಿದರು.
ಈ ಮೂಲಕ ಟೆಸ್ಟ್ ಕ್ರಿಕೆಟ್ ನ ಇತಿಹಾಸದಲ್ಲೆ ಆಲ್ ರೌಂಡರ್ ಆಗಿ ಇಪ್ಪತ್ತಕ್ಕೂ ಹೆಚ್ಚು ಅರ್ಧಶತಕ ಆರು ಶತಕಗಳೊಂದಿಗೆ 500ಕ್ಕೂ ಹೆಚ್ಚು ವಿಕೆಟ್ ಪಡೆದು 7ನೇ ಮತ್ತು 8ನೇ ಕ್ರಮಾಂಕದಲ್ಲಿ ಬ್ಯಾಟಿಂಗ್ ಬಂದು ಅತಿ ಹೆಚ್ಚು ಶತಕ ಎಂ.ಎಸ್ ಧೋನಿ ಅವರ ದಾಖಲೆಯನ್ನು ಸಹ ಸರಿಗಟ್ಟಿದ್ದಾರೆ.
ಕಳೆದ ತಿಂಗಳಷ್ಟೇ ಎಂ ಚಿದಂಬರಂ ಸ್ಟೇಡಿಯಂನಲ್ಲಿ ತಮಿಳುನಾಡು ಪ್ರೀಮಿಯರ್ ಲೀಗ್‌ನಲ್ಲಿ ದಿಂಡಿಗಳು ಡ್ರ್ಯಾಗನ್ಸ್ ಪರ 10 ಪಂದ್ಯಗಳಲ್ಲಿ 250ಕ್ಕೂ ಹೆಚ್ಚು ರನ್ ಹಾಗೂ 9 ವಿಕೆಟ್ ಪಡೆದು ಉತ್ತಮ ಫಾರ್ಮ್ ನಲ್ಲಿ ಇದ್ದರು. ಅದೇ ಫಾರ್ಮನ್ನು ಈಗ ಬಾಂಗ್ಲಾದೇಶದ ಟೆಸ್ಟ್ ಸರಣಿಯಲ್ಲಿ ಶತಕ ಸಿಡಿಸುವುದರ ಮೂಲಕ ಮುಂದುವರಿಸಿದ್ದಾರೆ.