ದೆಹಲಿಯಲ್ಲಿ ಜೊತೆಗೂಡಿದ ಯತ್ನಾಳ್ ಗುಂಪಿನ ಬಿಜೆಪಿ ರೆಬೆಲ್ಸ್: ವರಿಷ್ಠರಿಗೆ ಇಂದು ವರದಿ ಸಲ್ಲಿಕೆ
ಹೊಸದಿಲ್ಲಿ: ನಿನ್ನೆ ರಾಜ್ಯ ಬಿಜೆಪಿ ಬಂಡಾಯ ನಾಯಕರ ಪೈಕಿ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ಮಾತ್ರ ದೆಹಲಿಯಲ್ಲಿ ಕಾಣಿಸಿದ್ದರು. ಆದರೆ ಇಂದು ಯತ್ನಾಳ್ ಜೊತೆಗೆ ಕಿತ್ತೂರು ಕರ್ನಾಟಕ ಹಾಗೂ ಕಲ್ಯಾಣ ಕರ್ನಾಟಕ ಭಾಗದಲ್ಲಿ ವಕ್ಫ್ ವಿರುದ್ಧ ಹೋರಾಟ ನಡೆಸಿದ ಅವರ ಸಂಗಡಿಗ ಬಿಜೆಪಿ ಮುಖಂಡರು ಜೊತೆಗೂಡಿದರು.
ಮಾಜಿ ಸಚಿವರಾದ ರಮೇಶ್ ಜಾರಕಿಹೊಳಿ, ಅರವಿಂದ ಲಿಂಬಾವಳಿ, ಮಾಜಿ ಸ್ಪೀಕರ್ ಕುಮಾರ್ ಬಂಗಾರಪ್ಪ ಹಾಗೂ ಇತರೆ ಕೆಲ ಬಂಡಾಯ ಬಿಜೆಪಿ ಮುಖಂಡರು ಇಂದು ತಮ್ಮ ಹೋರಾಟದ ಮಧ್ಯಂತರ ವರದಿಯನ್ನು ಕೇಂದ್ರದ ನಾಯಕರಿಗೆ ಸಲ್ಲಿಸಲಿದ್ದಾರೆ.
ಈ ಮಧ್ಯೆ, ಹೈಕಮಾಂಡ್ ಜಾರಿಮಾಡಿರುವ ಶೋಕಾಸ್ ನೋಟೀಸ್ ಗೆ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ಉತ್ತರ ನೀಡುವ ನಿರೀಕ್ಷೆಯೂ ಇದ್ಲೆ.
ಇದೇ ಕಾರಣಕ್ಕೆ ರಾಜ್ಯ ಬಂಡಾಯ ಬಿಜೆಪಿ ಮುಖಂಡರು ಇಂದು ದೆಹಲಿಯಲ್ಲಿ ಸಭೆ ಸೇರಿರುವ ಸಾಧ್ಯತೆ ಇದೆ.


