ತಿರುಪತಿ ವಿಐಪಿ ಬ್ರೇಕ್ ದರ್ಶನ : ಟಿಟಿಡಿಯಿಂದ ಭಕ್ತಾಧಿಗಳಿಗೆ ಗುಡ್ ನ್ಯೂಸ್
ತಿರುಮಲ: ತಿರುಮಲ ತಿರುಪತಿ ದೇವಸ್ಥಾನಗಳು (ಟಿಟಿಡಿ) ‘ಆನಂದ ನಿಲಯಂ ಅನಂತ ಸ್ವರ್ಣಮಯಂ’ ಯೋಜನೆಯ ದಾನಿಗಳಿಗೆ ವಿಐಪಿ ಬ್ರೇಕ್ ದರ್ಶನವನ್ನು ವಿಸ್ತರಿಸಲು ಮಹತ್ವದ ನಿರ್ಧಾರವನ್ನು ತೆಗೆದುಕೊಂಡಿದೆ.
ಈ ಹಿಂದೆ ಈ ಯೋಜನೆಯಡಿ ದಾನಿಗಳಿಗೆ ದರ್ಶನದ ನಂತರ ವಿಶೇಷ ವಿಧಿವಿಧಾನಗಳನ್ನು ನೀಡಲಾಗುತ್ತಿತ್ತು. ಈಗ, ಟಿಟಿಡಿ ಮಂಡಳಿ ಕೆಲ ಬದಲಾವಣೆಯನ್ನು ಘೋಷಿಸಿದ್ದು, ಈ ದಾನಿಗಳಿಗೆ ವಾರ್ಷಿಕವಾಗಿ ಮೂರು ದಿನಗಳ ವಿಐಪಿ ಬ್ರೇಕ್ ದರ್ಶನ ಮತ್ತು ವಸತಿ ಸೌಲಭ್ಯಗಳನ್ನು ಒದಗಿಸಲು ತೀರ್ಮಾನಿಸಿದೆ.
ಅನಿವಾರ್ಯ ಕಾರಣಗಳಿಂದ 2008 ರಲ್ಲಿ ‘ಆನಂದ ನಿಲಯಂ ಅನಂತ ಸ್ವರ್ಣಮಯಂ’ ಯೋಜನೆಯನ್ನು ಸ್ಥಗಿತಗೊಳಿಸಲಾಯಿತು. ಆಗಿನಿಂದ ಈ ಯೋಜನೆಯಡಿ ಯಾವುದೇ ವಿಶೇಷ ಸೌಲಭ್ಯಗಳನ್ನು ನೀಡುತ್ತಿರಲಿಲ್ಲ. ಇದೀಗ ಮರಳಿ ವಿಶೇಷ ಸೌಲಭ್ಯಗಳನ್ನು ನೀಡಲು ಟಿಟಿಡಿ ತೀರ್ಮಾನಿಸಿದೆ.