ಸಾರಿಗೆ ಸಂಸ್ಥೆಗಳ ಸಿಬ್ಬಂದಿಗೆ ಮತ್ತೊಂದು ಗುಡ್ ನ್ಯೂಸ್ : 224.05 ಕೋಟಿ ಬಾಕಿ ಹಣ ಬಿಡುಗಡೆ

Oplus_131072

Oplus_131072

Share It

ನಿವೃತ್ತ ಸಿಬ್ಬಂದಿಯ ಉಪಧನ ಮತ್ತು ಗಳಿಕೆ ರಜೆ ನಗದೀಕರಣ ಮೊತ್ತ ಬಿಡುಗಡೆ

ಬೆಂಗಳೂರು: 2020 ರ ವೇತನ ಪರಿಷ್ಕರಣೆಗೆ ಸಂಬಂಧಿಸಿ ನಿವೃತ್ತ ಸಿಬ್ಬಂದಿಗೆ ನೀಡಬೇಕಾಗಿದ್ದ ಬಾಕಿ ಹಣವನ್ನು ಸಾರಿಗೆ ಮತ್ತು ಮುಜರಾಯಿ ಸಚಿವ ರಾಮಲಿಂಗಾ ರೆಡ್ಡಿ ಬಿಡುಗಡೆ ಮಾಡಿದರು.

KSRTC ಕೇಂದ್ರ ಕಚೇರಿಯಲ್ಲಿ ಸಾಂಕೇತಿಕವಾಗಿ ಮೂವರಿಗೆ ಸಿಬ್ಬಂದಿಗೆ ಬಾಕಿ ಉಪಧನ ಹಾಗೂ ಗಳಿಕೆ ರಜೆ ನಗದೀಕರಣ ಮೊತ್ತದ ಚೆಕ್ ಅನ್ನು ವಿತರಿಸಿದ ಅವರು, ʼನುಡಿದಂತೆ ನಡೆದಿದ್ದೇವೆ’ ಎಂಬುದನ್ನು ನಾವು ಮತ್ತೊಮ್ಮೆ ಸಾಬೀತುಪಡಿಸಿರುತ್ತೇವೆ ಎಂದು ತಿಳಿಸಿದರು.

ಈ ಹಿಂದೆ ನೌಕರರ ಸಂಘಟನೆಗಳೊಂದಿಗೆ ನಡೆದ ಸಭೆಯಲ್ಲಿ ಅವರ ಬೇಡಿಕೆಗಳಿಗೆ ಸಂಬಂಧಿಸಿ ಮಾತುಕತೆ ನಡೆಸಿ, ಅವುಗಳಲ್ಲಿ ಕೆಲ ಬೇಡಿಕೆ ಈಡೇರಿಸುವುದಾಗಿ ನೀಡಿದ್ದ ಭರವಸೆಯಂತೆ, ನಾಲ್ಕು ಸಾರಿಗೆ ನಿಗಮಗಳ 1308 ಚಾಲನಾ ಮತ್ತು ತಾಂತ್ರಿಕ ಸಿಬ್ಬಂದಿಯ ಅಂತರ ನಿಗಮ ವರ್ಗಾವಣೆ ತಾತ್ಕಾಲಿಕ ಪಟ್ಟಿ ಬಿಡುಗಡೆ ಮಾಡಲಾಗಿದೆ ಎಂದರು.

ಎಲ್ಲಾ 11,694 ನಿವೃತ್ತ ಸಿಬ್ಬಂದಿಗೆ ನೀಡಬೇಕಾಗಿದ್ದ ಬಾಕಿ ಉಪಧನ ಮತ್ತು ಗಳಿಕೆ ರಜೆ ನಗದೀಕರಣ ಮೊತ್ತವನ್ನು ಅಧಿವೇಶನದ ನಂತರ ಬಿಡುಗಡೆಗೊಳಿಸುವುದಾಗಿ ನೀಡಿದ್ದ ಭರವಸೆಯಂತೆ ಸರ್ಕಾರದ ಅಧಿಸೂಚನೆ ಸಂಖ್ಯೆ ಟಿಡಿ 72 ಟಿಸಿಬಿ 2021(ಭಾ-1), ದಿನಾಂಕ 07.12.2024 ರನ್ವಯ ಸರ್ಕಾರದಿಂದ ಅನುದಾನ ಬಿಡುಗಡೆಗೊಳಿಸಲಾಗಿತ್ತು ಎಂದು ತಿಳಿಸಿದರು.

ನಾಲ್ಕು ಸಾರಿಗೆ ನಿಗಮಗಳಲ್ಲಿ ದಿನಾಂಕ: 01.01.2020 ರಿಂದ 28.02.2023 ರವರೆಗಿನ ಅವಧಿಯಲ್ಲಿ ಸಂಸ್ಥೆಯ ಸೇವೆಯಿಂದ ನಿವೃತ್ತಿ ಹೊಂದಿರುವ ಸುಮಾರು 11,694 ಸಿಬ್ಬಂದಿಗೆ ನೀಡಬೇಕಾಗಿದ್ದ ಬಾಕಿ ಉಪಧನ ಮತ್ತು ಗಳಿಕೆ ರಜೆ ನಗದೀಕರಣ ಮೊತ್ತ 224.05 ಕೋಟಿ ರು.ಗಳನ್ನು ಬಿಡುಗಡೆ ಮಡಲಾಗಿದೆ ಎಂದರು.

                                                                                                                                                                  ಸಂಸ್ಥೆಗಳು

ಕರಾರಸಾ ನಿಗಮ-
4711 ಸಿಬ್ಬಂದಿ
86.55 ಕೋಟಿ ರು.

ಬೆಂಮನಸಾ ಸಂಸ್ಥೆ-
1833 – ಸಿಬ್ಬಂದಿ
50.25 ಕೋಟಿ ರು.

ವಾಕರಸಾ ಸಂಸ್ಥೆ
3116 ಸಿಬ್ಬಂದಿ
51.50 ಕೋಟಿ ರು.

ಕಕರಸಾ ಸಂಸ್ಥೆ
2034 ಸಿಬ್ಬಂದಿ
35.75 ಕೋಟಿ ರು

ಒಟ್ಟು 11,694 ಸಿಬ್ಬಂದಿಯ ಮೊತ್ತ ರೂ. 224.05 ಕೋಟಿಗಳನ್ನು ಇಂದಿನಿಂದ RTGS ಹಾಗೂ ಚೆಕ್ ಮುಖಾಂತರ ನಿವೃತ್ತಿ ಹೊಂದಿದ ಸಿಬ್ಬಂದಿಗಳಿಗೆ ವಿತರಿಸಲು ಕ್ರಮಕೈಗೊಳ್ಳಲಾಗಿದೆ ಎಂದು ತಿಳಿಸಿದರು.

ಕಾಲಕಾಲಕ್ಕೆ ಸಿಬ್ಬಂದಿಗೆ ನೀಡಬೇಕಾಗಿರುವ ಆರ್ಥಿಕ ಹಾಗೂ ಇತರೆ ಸೌಲಭ್ಯಗಳನ್ನು ನೀಡದಿದ್ದರೆ, ಹಲವು ಸಮಸ್ಯೆಗಳಿಗೆ ಕಾರಣವಾಗುತ್ತದೆ. ಆದ್ದರಿಂದ ಎಲ್ಲಾ ನಿಗಮಗಳ ವ್ಯವಸ್ಥಾಪಕ ನಿರ್ದೇಶಕರು ಈ ಬಗ್ಗೆ ಗಮನವಹಿಸಲು ಈ ಸಂದರ್ಭದಲ್ಲಿ ಸಾರಿಗೆ ಸಚಿವರು ಸೂಚನೆ ನೀಡಿದರು.


KSRTC ಎಂಡಿ ಅನ್ಬುಕುಮಾರ್, BMTC ಎಂಡಿ ರಾಮಚಂದ್ರನ್, KSRTC ನಿರ್ದೇಶಕರು (ಸಿಬ್ಬಂದಿ ಮತ್ತು ಜಾಗೃತ) ಉಪಸ್ಥಿತರಿದ್ದರು.


Share It

You cannot copy content of this page