ಬೆಂಗಳೂರು: 2024 ರಲ್ಲಿ ದೇಶ ಅತ್ಯಂತ ದಾಖಲೆ ಪ್ರಮಾಣದ ಉಷ್ಣಾಂಶವನ್ನು ಕಂಡಿದ್ದು, ಈ ಶತಮಾನದ ಅತ್ಯಂತ ಹಾಟೆಸ್ಟ್ ವರ್ಷ ಎನ್ನಬಹುದು.
1901 ರಿಂದೀಚೆಗೆ ಅತ್ಯಂತ ಹೆಚ್ಚು ಉಷ್ಣಾಂಶ ದಾಖಲಾಗಿರುವುದು 2024 ರಲ್ಲಿ ಎಂದು ಭಾರತೀಯ ಹವಾಮಾನ ಇಲಾಖೆ ತಿಳಿಸಿದೆ. ಕನಿಷ್ಠ ತಾಪಮಾನದಲ್ಲಿ 0.90 ಡಿಗ್ರಿ ಸೆಲ್ಸಿಯಸ್ ಹೆಚ್ಚಳವಾಗಿದ್ದು, ಇದು ದೀರ್ಘಾವಧಿಯ ಸರಾಸರಿಗಿಂತ ಅತಿಹೆಚ್ಚು ಎನ್ನಲಾಗಿದೆ.
ವಾರ್ಷಿಕ ತಾಪಮಾನವು 25.75 ಡಿಗ್ರಿ ಸೆಲ್ಸಿಯಸ್ ತಲುಪಿದ್ದು, ಇದು ವಾರ್ಷಿಕ ಸರಾಸರಿಗಿಂತ 0.65 ಡಿಗ್ರಿಯಷ್ಟು ಹೆಚ್ಚಾಗಿದೆ. ಭೂಮಿಯ ಮೇಲ್ಮೈ ಸುಳಿಗಾಳಿಯು ಸಾಮಾನ್ಯ ಸರಾಸರಿಗಿಂತ 0.54 ಡಿಗ್ರಿ ಸೆಲ್ಸಿಯಸ್ ಹೆಚ್ಚು ಪ್ರಮಾಣದಲ್ಲಿ ದಾಖಲಾಗಿದೆ.
ಸರಾಸರಿ ಗರಿಷ್ಠ ತಾಪಮಾನದ ಮಟ್ಟವು 21.25 ಡಿಗ್ರಿ ಸೆಲ್ಸಿಯಸ್ ಗೆ ಮುಟ್ಟುವ ಮೂಲಕ ಸಾಮಾನ್ಯ ಸರಾಸರಿಗಿಂತ 0.25 ಡಿಗ್ರಿ ಸೆಲ್ಸಿಯಸ್ ಹೆಚ್ಚಾಗಿದೆ. ಕನಿಷ್ಠ ತಾಪಮಾನವು 20.24 ಇದ್ದು, ಸರಾಸರಿಗಿಂತ 0.90 ಡಿಗ್ರಿ ಸೆಲ್ಸಿಯಸ್ ತಲುಪಿದೆ. ಆ ಮೂಲಕ 1901 ರಿಂದ ಈವರೆಗಿನ ಅತ್ಯಂತ ಉಷ್ಣಾಂಶ ದಾಖಲಾದ ಎಂದು ಹವಾಮಾನ ಇಲಾಖೆ ತಿಳಿಸಿದೆ.
ಜುಲೈ, ಆಗಸ್ಟ್, ಸೆಪ್ಟೆಂಬರ್ ಮತ್ತು ಅಕ್ಟೋಬರ್ ತಿಂಗಳಲ್ಲಿ ಈ ಕನಿಷ್ಠ ಉಷ್ಠಾಂಶದಲ್ಲಿನ ಏರಿಕೆ ಕಂಡುಬಂದಿದ್ದು, ಪೆಬ್ರವರಿ ತಿಂಗಳಲ್ಲಿ ಎರಡನೇ ಅತಿಹೆಚ್ಚು ಸರಾಸರಿ ಕನಿಷ್ಠ ಉಷ್ಣಾಂಶ ದಾಖಲಾಗಿದೆ ಎಂದು ಹವಾಮಾನ ಇಲಾಖೆಯ ಅಂಕಿಅಂಶಗಳು ತಿಳಿಸಿವೆ.