ಉಪಯುಕ್ತ ಸುದ್ದಿ

ಕೃತಕ ಬುದ್ಧಿಮತ್ತೆ ಬಳಕೆಯಲ್ಲಿ ಪ್ರಾವೀಣ್ಯತೆ ಗಳಿಸಿ : ವಿದ್ಯಾರ್ಥಿಗಳಿಗೆ ಮುಕೇಶ್ ಅಂಬಾನಿ ಕಿವಿಮಾತು

Share It

ಗಾಂಧಿನಗರ : ‘ಚಾಟ್ ಜಿಪಿಟಿಯನ್ನು ಖಂಡಿತವಾಗಿಯೂ ಬಳಸಿ. ಆದರೆ ನಾವು ಕೃತಕ ಬುದ್ಧಿಮತ್ತೆಯಿಂದ ಅಲ್ಲ ನಮ್ಮ ಸ್ವಂತ ಬುದ್ಧಿವಂತಿಕೆಯಿಂದ ಮುಂದುವರೆಯುತ್ತೇವೆ. ನೀವೂ ನಿಮ್ಮ ಸ್ವಂತ ಬುದ್ಧಿಯಿಂದ ಮುಂದೆ ಸಾಗಬಹುದು ಎಂಬುದನ್ನು ನೆನಪಿಡಿ’ ಎಂದು ರಿಲಯನ್ಸ್ ಇಂಡಸ್ಟ್ರೀಸ್ ಅಧ್ಯಕ್ಷ ಮುಕೇಶ್ ಅಂಬಾನಿ ಅವರು ವಿದ್ಯಾರ್ಥಿಗಳಿಗೆ ಕಿವಿಮಾತು ಹೇಳಿದರು.

ಪಂಡಿತ್ ದೀನ್ ದಯಾಳ್ ಎನರ್ಜಿ ಯೂನಿವರ್ಸಿಟಿ (ಪಿಡಿಇಯು) ಘಟಿಕೋತ್ಸವ ಸಮಾರಂಭದಲ್ಲಿ ವಿದ್ಯಾರ್ಥಿಗಳನ್ನು ಉದ್ದೇಶಿಸಿ ಮಾತನಾಡುವಾಗ  ಅವರು ಕೃತಕ ಬುದ್ಧಿಮತ್ತೆಯ ಕುರಿತು ತಮ್ಮ ಅಭಿಪ್ರಾಯ ಹಂಚಿಕೊಂಡರು.

‘ನಾನು ನಮ್ಮ ಯುವ ವಿದ್ಯಾರ್ಥಿಗಳಿಗೆ ಒಂದು ಸಲಹೆ ನೀಡಲು ಬಯಸುತ್ತೇನೆ. ಕೃತಕ ಬುದ್ಧಿಮತ್ತೆಯನ್ನು ಸಾಧನವಾಗಿ ಬಳಸುವಲ್ಲಿ ಒಬ್ಬರು ಪ್ರವೀಣರಾಗಿರಬೇಕು ಆದರೆ ನಿಮ್ಮ ಬುದ್ಧಿವಂತಿಕೆಯನ್ನು ಬಳಸುವುದನ್ನು ನಿಲ್ಲಿಸಬೇಡಿ. ನೀವು ಈ ವಿಶ್ವವಿದ್ಯಾಲಯದಿಂದ ಹೊರಹೋದ  ತಕ್ಷಣ, ನೀವು ಇನ್ನೂ ದೊಡ್ಡದಾದ ‘ಯೂನಿವರ್ಸಿಟಿ ಆಫ್ ಲೈಫ್’ ನಲ್ಲಿ ಪ್ರವೇಶ ಪಡೆಯಬೇಕಾಗುತ್ತದೆ. ಅಲ್ಲಿ ಕ್ಯಾಂಪಸ್ ಇರುವುದಿಲ್ಲ, ತರಗತಿ ಇರುವುದಿಲ್ಲ ಮತ್ತು ಬೋಧನಾ ಶಿಕ್ಷಕರು ಇರುವುದಿಲ್ಲ. ನೀವು ನಿಮ್ಮ ಸ್ವಂತ ಜೀವನದಲ್ಲಿ ಮುಂದೆ ಸಾಗಲು ಸಾಧ್ಯವಾಗುತ್ತದೆ’ ಎಂದರು.

ಪ್ರಧಾನಿ ನರೇಂದ್ರ ಮೋದಿಯವರನ್ನು ಶ್ಲಾಘಿಸಿದ ಮುಕೇಶ್ ಅಂಬಾನಿ, ‘ಪಂಡಿತ್ ದೀನ್ ದಯಾಳ್ ಎನರ್ಜಿ ಯೂನಿವರ್ಸಿಟಿಯ ಜನನವು ಪ್ರಧಾನಿಯವರ ಅಸಾಧಾರಣ ದೂರದೃಷ್ಟಿಯ ಫಲಿತಾಂಶವಾಗಿದೆ. ಇಪ್ಪತ್ತು ವರ್ಷಗಳ ಹಿಂದೆ, ಇಂಧನ ಮತ್ತು ಇಂಧನ ಉತ್ಪನ್ನಗಳಲ್ಲಿ ಗುಜರಾತ್ ದೇಶವನ್ನು ಮುನ್ನಡೆಸಬೇಕೆಂದು ಅವರು ಬಯಸಿದ್ದರು. ಅದೇ ಸಮಯದಲ್ಲಿ, ವಿಶ್ವದರ್ಜೆಯ ಮಾನವ ಸಂಪನ್ಮೂಲವನ್ನು ಅಭಿವೃದ್ಧಿಪಡಿಸುವಲ್ಲಿ ಗುಜರಾತ್ ಪ್ರಮುಖ ಪಾತ್ರ ವಹಿಸಬೇಕು. ಹೀಗೆ ಈ ಪ್ರವರ್ತಕ ವಿಶ್ವವಿದ್ಯಾಲಯವನ್ನು ಸ್ಥಾಪಿಸಲಾಯಿತು’ ಎಂದರು ಮುಖೇಶ್ ಅಂಬಾನಿ ಪಿಡಿಇಯುನ ಸ್ಥಾಪಕ ಅಧ್ಯಕ್ಷ ಮತ್ತು ಅಧ್ಯಕ್ಷರಾಗಿದ್ದಾರೆ.

‘ಈ ಶತಮಾನದ ಅಂತ್ಯದ ವೇಳೆಗೆ, ಭಾರತವು ವಿಶ್ವದ ಅತ್ಯಂತ ಸಮೃದ್ಧ ರಾಷ್ಟ್ರವಾಗಲಿದೆ ಎಂದು ನಾನು ಸ್ಪಷ್ಟವಾಗಿ ನೋಡಬಲ್ಲೆ. ಭಾರತದ ಅಭಿವೃದ್ಧಿಯ ಪಯಣವನ್ನು ತಡೆಯಲು ವಿಶ್ವದ ಯಾವುದೇ ಶಕ್ತಿಗೆ ಸಾಧ್ಯವಿಲ್ಲ’ ಎಂದು ಅವರು ಅಭಿಪ್ರಾಯಪಟ್ಟರು.


Share It

You cannot copy content of this page