ಕನಕದಾಸರ ನಾಡಿನಲ್ಲಿ ಜಾತಿ ದೌರ್ಜನ್ಯದ ಕರಿನೆರಳು: ಮಹಿಳೆಗೆ ಪೊರಕೆ ಕಟ್ಟಿ ತಿರುಗಾಡುವಂತೆ ತಾಕೀತು
ಹಾವೇರಿ: ಆದುನಿಕ ಭಾರತದಲ್ಲಿ ಅಸ್ಪೃಶ್ಯತೆ ಮನೆಮಾಡಿದೆ ಎಂಬುದಕ್ಕೆ ಉದಾಹರಣೆಯಂತೆ ಕನಕಸದಾಸರ ನಾಡು ಹಾವೇರಿಯಲ್ಲಿಯೇ ಅಮಾನವೀಯ ಘಟನೆಯೊಂದು ನಡೆದಿದೆ.
ಹಾವೇರಿ ಜಿಲ್ಲೆ ರಾಣೆಬೆನ್ನೂರು ತಾಲೂಕಿನ ರಾಹುತನಹಟ್ಟಿ ಗ್ರಾಮದಲ್ಲಿ ಈ. ಘಟನೆ ನಡೆದಿದ್ದು, ಗ್ರಾಮದ ಮೇಲ್ಜಾತಿಯ ಜನರು ಗ್ರಾಮದ ದಲಿತ ಸಮುದಾಯದ ಮಹಿಳೆಯರ ಮೇಲೆ ದೌರ್ಜನ್ಯ ನಡೆಸಿರುವ ಬಗ್ಗೆ ಆರೋಪ ಕೇಳಿಬಂದಿದೆ.
ಮನೆ ಮುಂದಿನ ರಸ್ತೆಯಲ್ಲಿ ಓಡಾಡುವಂತಿಲ್ಲ, ಚಿಪ್ಪು ಕಟ್ಟಿಕೊಳ್ಳಿ ಎನ್ನುತ್ತಾರೆ. ಪೊರಕೆ ಕಟ್ಟಿಕೊಂಡು ನೀನು ತಿರುಗಾಡುವ ಜಾಗ ಶಯಚಿಗೊಳಿಸು ಎನ್ನುತ್ತಾರೆ. ಕೆಲವು ಗಂಡಸರು ನನ್ನ ಜತೆ ಬಂದು ಮಲಗು ಎಂದು ಬಲವಂತ ಮಾಡುತ್ತಾರೆ ಎಂದು ಆರೋಪಿಸಿದ್ದಾರೆ.
ತನಗೆ ಆಗುತ್ತೀರುವ ಸಮಸ್ಯೆ ಬಗ್ಗೆ ಆಕೆ ರಾಣೆಬೆನ್ನೂರ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ. ಮಹಿಳೆಗೆ ಬೆಂಬಲಕ್ಕೆ ನಿಂತರು ಎಂಬ ಕಾರಣಕ್ಕೆ ಗ್ರಾಮದ ದಲಿತ ಸಮುದಾಯದ 30 ಜನರ ಮೇಲೆಯೂ ದೌರ್ಜನ್ಯ ಎಸೆಗುತ್ತಾರೆ. ಇದರಿಂದ ನಂಂಗೆ ಮುಕ್ತಿ ಕೊಡಿಸಿ ಎಂದು ಬೇಡಿಕೊಂಡಿದ್ದಾರೆ.
ಮಹಿಳೆಯ ಮೇಲೆ ಜ.30 ಕ್ಕೆ ದೌರ್ಜನ್ಯ ನಡೆದಿರುವ ಕುರಿತು ರಾಣೆಬೆನ್ನೂರು ಗ್ರಾಮಾಂತರ ಠಾಣೆಯಲ್ಲಿ ದೂರು ದಾಖಲಾಗಿದ್ದರೂ, ಈವರೆಗೆ ಪೊಲೀಸರು ಯಾವುದೇ ಕ್ರಮ ತೆಗೆದುಕೊಂಡಿಲ್ಲ. ಪೊಲೀಸರು
ಜಾತಿನಿಂದನೆ ಕೇಸ್ ದಾಖಲು ಮಾಡಿದ್ದರೂ, ಯಾರೊಬ್ಬರನ್ನು ಬಂಧಿಸಿಲ್ಲ ಎಂದು ಆರೋಪಿಸಿದ್ದಾರೆ.
ನಮಗೆ ಅನ್ಯಾಯವಾದರೂ ಶಾಸಕ ಕೋಳಿವಾಡ ನಮಗೆ ಸಹಾಯ ಮಾಡುತ್ತಿಲ್ಲ. ಹೀಗಾಗಿ, ಪೊಲೀಸರು ಇಂತಹ ನಾಟಕ ಮಾಡುತ್ತಿದ್ದಾರೆ ಎಂದು ದೂರಿದ್ದಾರೆ. ಸೂಕ್ತ ಕ್ರಮ ತೆಗೆದುಕೊಂಡು ರಕ್ಷಣೆ ಕೊಡದಿದ್ದರೆ, ನಾವು ಉಗ್ರ ಹೋರಾಟ ಮಾಡುತ್ತೇವೆ ಎಂದು ದಲಿತ ಸಂಘಟನೆಗಳು ಒತ್ತಾಯಿಸಿವೆ


