ಎಚ್.ಸಿ.ಮಹದೇವಪ್ಪ ಮನೆಯಲ್ಲಿ ನಡೆದ ಸಭೆಯಲ್ಲಿ ನಡೆದ ಚರ್ಚೆಯೇನು? ಸಚಿವ ಸತೀಶ್ ಜಾರಕಿಹೊಳಿ ಹೇಳಿದ್ದೇನು?
ಬೆಂಗಳೂರು: ಗೃಹ ಸಚಿವ ಡಾ. ಜಿ ಪರಮೇಶ್ವರ್ ನೇತೃತ್ವದಲ್ಲಿ ನಮ್ಮ ಸಮಾಜ ಕಲ್ಯಾಣ ಇಲಾಖೆ ಸಚಿವ ಹೆಚ್.ಸಿ ಮಹದೇವಪ್ಪ ನಿವಾಸದಲ್ಲಿ ಸಭೆ ಸೇರಲಾಗಿತ್ತು ಎಂದು ಸಚಿವ ಸತೀಶ್ ಜಾರಕಿಹೊಳಿ ತಿಳಿಸಿದರು. ಆ ಸಭೆಯಲ್ಲಿ ಏನೇನು ಚರ್ಚೆಯಾಯ್ತು ಎಂಬುದನ್ನೂ ಅವರು ತಿಳಿಸಿದ್ದಾರೆ.
“ಇವತ್ತು ಗೃಹ ಸಚಿವ ಡಾ.ಜಿ ಪರಮೇಶ್ವರ್ ನೇತೃತ್ವದಲ್ಲಿ ಸಮಾಜಕಲ್ಯಾಣ ಸಚಿವ ಎಚ್.ಸಿ ಮಹದೇವಪ್ಪ ಮನೆಯಲ್ಲಿ ಸಚಿವರಾದ ಕೆ.ಎಚ್.ಮುನಿಯಪ್ಪ, ಮಹದೇವಪ್ಪ, ತಿಮ್ಮಾಪುರ, ನಾನು ಸೇರಿದಂತೆ ಸಚಿವರು, ಪರಿಷತ್ ಸದಸ್ಯರು ಸೇರಿ ಸಭೆ ಮಾಡಿದೆವು. ಈ ಸಭೆಯಲ್ಲಿ ಬರುವ ತಾಲ್ಲೂಕು-ಜಿಲ್ಲಾ ಪಂಚಾಯತಿ ಚುನಾವಣೆ ಬಗ್ಗೆ ಚರ್ಚೆ ಮಾಡಿದೆವು, ಆನಂತರ ಎಸ್ಸಿ-ಎಸ್ಟಿ ವರ್ಗಗಳ ಒಳಮೀಸಲಾತಿ ಜಾರಿ ಬಗ್ಗೆ ವಿಸ್ತ್ರತ ಚರ್ಚೆ ಆಯಿತು.
ತದನಂತರ ಎಸ್ಸಿ-ಎಸ್ಟಿ ವರ್ಗಗಳ ಅಭಿವೃದ್ಧಿಗೆ ಯಾವ್ಯಾವ ಯೋಜನೆಗಳನ್ನು ಜಾರಿಗೊಳಿಸಬೇಕೆಂದು ಚರ್ಚೆ ಮಾಡಲಾಯಿತು. ಒಟ್ಟಾರೆ ಈ ಸಭೆಯಲ್ಲಿ ರಾಜ್ಯದ ಎಸ್ಸಿ-ಎಸ್ಟಿ ವರ್ಗಗಳ ಉನ್ನತೀಕರಣಕ್ಕೆ ಬೇಕಾದ ಯೋಜನೆಗಳು, ಒಳಮೀಸಲಾತಿ ಹಾಗೂ ಬೇಕಾದ ಎಲ್ಲಾ ಕೆಲಸ-ಕಾರ್ಯಗಳನ್ನು ಜಾರಿಗೊಳಿಸಲು ಗಂಭೀರ ಚರ್ಚೆ ನಡೆಸಿದೆವು ಎಂದು ತಿಳಿಸಿದರು.


