ಕ್ರೀಡೆ ಸುದ್ದಿ

ಚೆಸ್ ಒಲಿಂಪಿಯಾಡ್ ನಲ್ಲಿ ಭಾರತಕ್ಕೆ ಸ್ವರ್ಣ ಪದಕ

Share It

ಹೊಸದಿಲ್ಲಿ: 45ನೇ ಚೆಸ್ ಒಲಿಂಪಿಯಾಡ್ ನಲ್ಲಿ ಭಾರತದ ಪುರುಷ ಮತ್ತು ಮಹಿಳಾ ತಂಡದ ಆಟಗಾರರು ಸ್ವರ್ಣ ಪದಕ ಗೆದ್ದು ಐತಿಹಾಸಿಕ ಸಾಧನೆ ಮಾಡಿದ ಆಟಗಾರರನ್ನು ಬುಧವಾರ ಪ್ರಧಾನಿ ನರೇಂದ್ರ ಮೋದಿ ಅವರು ತಮ್ಮ ನಿವಾಸದಲ್ಲಿ ಭೇಟಿ ಮಾಡಿ ಶ್ಲಾಘಿಸಿದರು.

ಚೆಸ್ ಒಲಿಂಪಿಯಾಡ್ ಒಟ್ಟು 11 ಸುತ್ತುಗಳು ನಡೆದವು ಅದರಲ್ಲಿ ಪುರುಷರ ತಂಡ ಯಾವುದೇ ಪಂದ್ಯ ಸೋಲದೇ ಸ್ವರ್ಣ ಪದಕ ಗೆದ್ದರು. ಪುರುಷರ ತಂಡದಲ್ಲಿ ನಾಯಕ ಶ್ರೀನಾಥ್ ನಾರಾಯಣನ್, ಡಿ ಗುಕೇಶ್, ಆರ್ ಪ್ರಜ್ಞಾನಂದ, ವಿದಿತ್ ಗುಜರಾತಿ, ಅರ್ಜುನ್ ಇರಿಗೈಸಿ ಗೆದ್ದ ತಂಡದ ಆಟಗಾರರು. ಮಹಿಳೆಯರು ಒಟ್ಟು ಸುತ್ತುಗಳಲ್ಲಿ ಒಂದು ಪಂದ್ಯ ಮಾತ್ರ ಸೋಲು ಕಂಡು ಸ್ವರ್ಣ ಪದಕ ಗೆದ್ದು ಕೊಂಡದರು. ಮಹಿಳಾ ತಂಡದಲ್ಲಿ ನಾಯಕಿ ಅಭಿಜಿತ್ ಕುಂಟೆ, ಹರಿಕಾ, ಆರ್ ವೈಶಾಲಿ, ದಿವ್ಯಾ ದೇಶ್ ಮುಖ್, ತಾನಿಯಾ ಸಚ್ ದೇವ್, ವಂತಿಕ ಆಗರ್ವಾಲ್ ತಂಡದ ಆಟಗಾರ್ತಿಯರು.

ಪುರುಷ ಮತ್ತು ಮಹಿಳಾ ತಂಡ ಮೊಟ್ಟ ಮೊದಲ ಬಾರಿಗೆ ಸ್ವರ್ಣ ಪದಕ ಗೆದ್ದ ಕೊಂಡಿವೆ.ತಂಡದ ಎಲ್ಲಾ ಆಟಗಾರರು ಮೋದಿ ಅವರೊಂದಿಗೆ ಸಂವಾದ ನಡೆಸಿದರು. ನಂತರ ಮೋದಿಯವರ ಮುಂದೆ ರಾಪಿಡ್ ಚೆಸ್ ಪಂದ್ಯವನ್ನು ಪ್ರಜ್ಞಾನಂದ ಮತ್ತು ಅರ್ಜುನ್ ಆಡಿದ್ದರು. ಈ ಸಮಯದಲ್ಲಿ ಚೆಸ್ ಆಟದ ವಿಧಾನದ ಬಗ್ಗೆ ಮಾಹಿತಿಯನ್ನು ಚರ್ಚೆ ನಡೆಯಿತು.

ಅಖಿಲ ಭಾರತ ಚೆಸ್ ಒಕ್ಕೂಟ ಚೆಸ್ ಒಲಿಂಪಿಯಾಡ್ ಸ್ವರ್ಣ ಪದಕ ಗೆದ್ದ ಆಟಗಾರರಿಗೆ 3.2 ಕೋಟಿ ಬಹುಮಾನ ಘೋಷಿಸಿದೆ. ಪುರುಷ ಮತ್ತು ಮಹಿಳಾ ತಂಡದ ಪ್ರತಿಯೊಬ್ಬರಿಗೂ 25 ಲಕ್ಷ. ತಂಡದ ಮುಖ್ಯಸ್ಥ ಗ್ರಾಂಡ್‌ ಮಾಸ್ಟರ್ ದಿವೇಂದು ಬರುವಾ 10 ಲಕ್ಷ ರೂ. ಮತ್ತು ಇತರ ಸಹಾಯಕ ಕೋಚ್‌ಗಳಿಗೆ 7.5 ಲಕ್ಷ ರೂ. ಪಡೆಯಲಿದ್ದಾರೆ. ಉಭಯ ತಂಡಗಳ ನಾಯಕರಿಗೆ 15 ಲಕ್ಷ ಘೋಷಿಸಿದ್ದಾರೆ.


Share It

You cannot copy content of this page