ಸತತ ಬಿಸಿಲಿನ ಬೇಗೆಯಿಂದ ತತ್ತರಿಸಿದ್ದ ಬೆಂಗಳೂರಿಗೆ ಇಂದು ವರುಣ ಕೊಂಚ ತಂಪೆರೆದಿದ್ದಾನೆ.
ಹೌದು, ಬೆಂಗಳೂರಿನ ಉತ್ತರ ಭಾಗದ ಹೆಬ್ಬಾಳ, ಭೂಪಸಂದ್ರ, ಆರ್.ಟಿ.ನಗರ, ಸಂಜಯನಗರ, ಮೇಕ್ರಿ ವೃತ್ತ ಮುಂತಾದ ಪ್ರದೇಶಗಳಲ್ಲಿ ಇಂದು ಬೇಸಿಗೆ ಮಳೆ ಅಥವಾ ಮುಂಗಾರು ಪೂರ್ವ ಮಳೆ ಸುರಿಯಿತು.
ಇದರಿಂದ ವಾಹನ ಸಂಚಾರಕ್ಕೆ ಕೊಂಚ ಅಡ್ಡಿಯಾದರೂ ಜನಸಾಮಾನ್ಯರು ಮಾತ್ರ ತಂಪೆರೆದ ಮಳೆಯಿಂದ ಹರ್ಷಗೊಂಡರು. ಅಂದಹಾಗೆ ಇದೇ ರೀತಿ ರಾಜಧಾನಿ ಬೆಂಗಳೂರಿನಲ್ಲಿ ಇನ್ನೆರಡು ದಿನ ಸುರಿಯಲಿದೆ ಎಂದು ಹವಾಮಾನ ಇಲಾಖೆ ಈಗಾಗಲೇ ಮಾಹಿತಿ ನೀಡಿದೆ.