ಪಿಯುಸಿಯಲ್ಲಿ ವಿದ್ಯಾಚೇತನ ಕಾಲೇಜಿನ ವಿದ್ಯಾರ್ಥಿಗಳಾದ ಅನಿಕೇತ್, ಅನನ್ಯಾ ಸಾಧನೆ
ಬೆಂಗಳೂರು: ಬೆಂಗಳೂರು ಗ್ರಾಮಾಂತರ ಜಿಲ್ಲೆಯ ನೆಲಮಂಗಲ ಪಟ್ಟಣದ ಭಿನ್ನಮಂಗಲದ “ವಿದ್ಯಾ ಚೇತನ ಟೆಕ್ನೋ ಪದವಿ ಪೂರ್ವ ಕಾಲೇಜಿನ” ವಿದ್ಯಾರ್ಥಿಗಳಾದ ಅನಿಕೇತ್. ಹೆಚ್. ಕುಲಕರ್ಣಿ. ಹಾಗೂ ಅನನ್ಯಾ ಹೆಚ್. ಕುಲಕರ್ಣಿ ಅವರು, ದ್ವಿತೀಯ ಪಿಯುಸಿ ಪರೀಕ್ಷೆಯಲ್ಲಿ ಅತ್ಯುತ್ತಮ ಅಂಕಗಳಿಸಿದ್ದಾರೆ.
ಅನಿಕೇತ್ .ಹೆಚ್. ಕುಲಕರ್ಣಿ. ವಿಜ್ಞಾನ ವಿಭಾಗದಲ್ಲಿ 600 ಕ್ಕೆ 573 (95.55) ಅಂಕ ಪಡೆದು ಕಾಲೇಜಿಗೆ ಗೌರವ ತಂದಿದ್ದಾನೆ. ಆತನ ಸಹೋದರಿಯಾದ ಅನನ್ಯಾ .ಹೆಚ್. ಕುಲಕರ್ಣಿ” ವಾಣಿಜ್ಯ ವಿಭಾಗದಲ್ಲಿ 600ಕ್ಕೆ 494 (82.33) ಅಂಕ ಪಡೆದು ಕಾಲೇಜಿಗೆ ಕೀರ್ತಿಯನ್ನು ತಂದಿದ್ದಾಳೆ.
ವಿದ್ಯಾ ಚೇತನ ಪಿಯು ಕಾಲೇಜಿನ ಪ್ರಾಂಶುಪಾಲರಾದ
ಮಹದೇವಯ್ಯ ಹಾಗೂ ಉಪನ್ಯಾಸಕರ ಮಾರ್ಗದರ್ಶನ, ಪ್ರೋತ್ಸಾಹದಿಂದ ಈ ಸಾಧನೆ ಸಾಧ್ಯವಾಗಿದೆ ಎಂದು ವಿದ್ಯಾರ್ಥಿಗಳು ಹರ್ಷ ವ್ಯಕ್ತಪಡಿಸಿದ್ದಾರೆ.
ಪೋಷಕರಾದ ಹನುಮಂತರಾವ್ ಕುಲಕರ್ಣಿ ಹಾಗೂ ಶುಭ ಕುಲಕರ್ಣಿ ಅವರು ತಮ್ಮ ಮಕ್ಕಳ ಸಾಧನೆಯ ಬಗ್ಗೆ ಸಂತಸ ವ್ಯಕ್ತಪಡಿಸಿದ್ದು, ಕಾಲೇಜಿನ ಪ್ರಾಂಶುಪಾಲರು, ಉಪನ್ಯಾಸಕರು ಹಾಗೂ ಸಿಬ್ಬಂದಿಗೆ ಧನ್ಯವಾದ ಅರ್ಪಿಸಿದ್ದಾರೆ.


