ಕ್ರೀಡೆ ಸುದ್ದಿ

RCB:KKR ಪಂದ್ಯದ ವೇಳೆ ಟೆಸ್ಟ್ ಜರ್ಸಿಯಲ್ಲಿ ಮಿಂಚಲಿರುವ ಬೆಂಗಳೂರಿನ ಅಭಿಮಾನಿಗಳು !

Share It


ಬೆಂಗಳೂರು: ಪಾಕಿಸ್ತಾನದ ವಿರುದ್ಧದ ಬಿಕ್ಕಟ್ಟಿನ ಕಾರಣಕ್ಕೆ ಮುಂದೂಡಲ್ಪಟ್ಟ TATA IPL ಇದೀಗ ಮರಳಿ ಆರಂಭವಾಗುತ್ತಿದ್ದು, ಮೊದಲ ಪಂದ್ಯದಲ್ಲಿ ವಿರಾಟ್ ಗೆ ನೆನಪಿನಲ್ಲುಳಿಯುವ ಕಾಣಿಕೆ ನೀಡಲು ಅಭಿಮಾನಿಗಳು ಸಜ್ಜಾಗಿದ್ದಾರೆ.

14 ವರ್ಷಗಳ ಟೆಸ್ಟ್‌ ಕ್ರಿಕೆಟ್‌ ಬದುಕಿಗೆ ವಿದಾಯ ಘೋಷಿಸಿರುವ ವಿರಾಟ್‌ ಕೊಹ್ಲಿ, ನಿವೃತ್ತಿ ಘೋಷಣೆ ನಂತರ ಮೊದಲ ಪಂದ್ಯವಾಡುತ್ತಿದ್ದಾರೆ‌. ಹೀಗಾಗಿ, ಅವರಿಗೆ ವಿಶೇಷ ಗೌರವ ಸಲ್ಲಿಸಲು ಮುಂದಾಗಿದ್ದು, ಮೇ 17 ರಂದು ನಡೆಯಲಿರುವ ಆರ್‌ಸಿಬಿ vs ಕೆಕೆಆರ್‌ ನಡುವಣ ಪಂದ್ಯದ ವೇಳೆ ವಿರಾಟ್ ಕೋಹ್ಲಿ ಅವರ ಟೆಸ್ಟ್ ಜರ್ಸಿಯಲ್ಲಿ ಇಡೀ ಮೈದಾನ ಕಂಗೊಳಿಸಲಿದೆ.

ಈ ಸಂಬಂಧ ಈಗಾಗಲೇ ಸಾಮಾಜಿಕ ಜಾಲತಾಣದಲ್ಲಿ ಅಭಿಯಾನ ಆರಂಭವಾಗಿದ್ದು, ವೈಟ್ ಜರ್ಸಿಯಲ್ಲಿ ಬರುವಂತೆ ಅಭಿಮಾನಿಗಳಿಗೆ ಮನವಿ ಮಾಡಿಕೊಳ್ಳಲಾಗುತ್ತಿದೆ. ಅಭಿಯಾನಕ್ಕೆ ಭಾರಿ ಪ್ರಶಂಸೆ ಮತ್ತು ಬೆಂಬಲ ವ್ಯಕ್ತವಾಗುತ್ತಿದ್ದು, ಬಿಳಿ ಜರ್ಸಿಯ ಜತೆಗೆ ಕ್ರೀಡಾಂಗಣದಲ್ಲಿ ಮಿಂಚಲು ಆರ್.ಸಿಬಿ ಅಭಿಮಾನಿಗಳು ಸಜ್ಜಾಗಿದ್ದಾರೆ.

ಈ ನಡುವೆ ಅಭಿಮಾನಿಗಳ ಇಂತಹ ಪ್ರಯತ್ನಕ್ಕೆ ಸಾಮಾಜಿಕ ಜಾಲತಾಣದಲ್ಲಿ ಮೆಚ್ಚುಗೆ ವ್ಯಕ್ತವಾಗಿದೆ. ವಿರಾಟ್ ಮತ್ತು ಆರ್ ಸಿಬಿ ಅಭಿಮಾನಿಗಳು ಇಂತಹ ವಿಶೇಷ ಮಾಡಿಯೇ ಮಾಡುತ್ತಾರೆ ಎಂದು ಕೆಲವರು ಕೊಂಡಾಡಿದ್ದಾರೆ.


Share It

You cannot copy content of this page