ಉಪಯುಕ್ತ ಸುದ್ದಿ

ಮನೆಯ ಮೇಲ್ಯಾಕೆ ಬಂತು ಕಾರು: ಜನರಿಗೆ ಕುತೂಹಲ ಮೂಡಿಸಿದ ಮನೆಯ ಮೇಲಿನ ಕಾರು!

Share It

ಬೆಳಗಾವಿ: ನಿಪ್ಪಾಣಿ ತಾಲೂಕು ಬೇಡಕಿಹಾಳ ಗ್ರಾಮದ ಸೂರಜ್ ನಾರೆ ತಮ್ಮ ಮನೆಯ ತಾರಸಿ ಮೇಲೆ ಕಾರು ಇಟ್ಟು ಪೂಜಿಸುತ್ತಿದ್ದಾರೆ.

ಮೆಕ್ಯಾನಿಕ್ ಆಗಿರುವ ಅವರು ತಮ್ಮ ಮೂರು ಅಂತಸ್ತಿನ ಮನೆ ಮೇಲೆ ಕಾರು ಇಟ್ಟಿದ್ದಾರೆ. ಕ್ರೇನ್ ಮೂಲಕ ಕಾರನ್ನು ಇಟ್ಟಿದ್ದು, ಸಾರ್ವಜನಿಕರಿಗೆ ನೋಡುವಂತೆ ಇರಿಸಿದ್ದಾರೆ.

ಐಐಟಿ ಓದಿರುವ ಸೂರಜ್, ಪುಣೆಯ ಗ್ಯಾರೇಜ್ ನಲ್ಲಿ ಮೆಕ್ಯಾನಿಕ್ ಆಗಿ ನಾಲ್ಕು ವರ್ಷ ದುಡಿಮೆ ಮಾಡಿದ್ದಾರೆ. 12 ವರ್ಷದ ಹಿಂದೆ ಬೇಡಕಿಹಾಳಕ್ಕೆ ಬಂದು ಸ್ವಂತ ಗ್ಯಾರೇಜ್ ಆರಂಭಿಸಿದರು. ನಂತರ ಕಾರು ಚಾಲನಾ ತರಬೇತಿ ಕೇಂದ್ರ ಆರಂಭಿಸಿದರು. ಕೆಂಪು ಬಣ್ಣದ ಕಾರು ಕರಿದಿಸಿ ಚಾಲನಾ ತರಬೇತಿ ನೀಡಲು ಆರಂಭ ಮಾಡಿದರು.

ವರ್ಷದಿಂದ ವರ್ಷಕ್ಕೆ ಅವರ ಆರ್ಥಿಕ ಸ್ಥಿತಿ ಉತ್ತಮಗೊಳ್ಳತೊಡಗಿತು. ಸದ್ಯ ಅವರ ಬಳಿ 5 ಕಾರು ಇವೆ. ಮೂರು ಅಂತಸ್ತಿನ ಮನೆಯನ್ನು ಸಹ ಕಟ್ಟಿದ್ದಾರೆ. 2022ರ ಜನವರಿಯಲ್ಲಿ ಮನೆಯ ತಾರಸಿ ಮೇಲೆ ಕಾರು ಇಟ್ಟಿದ್ದಾರೆ. ಪ್ರತಿ ಹುಣ್ಣಿಮೆ, ಅಮಾವಾಸ್ಯೆ ಹಾಗೂ ಹಬ್ಬದ ಸಂದರ್ಭದಲ್ಲಿ ಕಾರನ್ನು ಪೂಜಿಸುತ್ತಿದ್ದಾರೆ.

ನಮ್ಮ ಪಾಲಿಗೆ ದೇವರು ಆಗಿರುವ ಈ ಕಾರು ನಮ್ಮ ಕುಟುಂಬವನ್ನು ಉತ್ತಮ ಸ್ಥಿತಿಗೆ ಬರುವಂತೆ ಮಾಡಿದೆ. ಆ ಕಾರಣದಿಂದ ಅಭಿಮಾನದಿಂದ ಮನೆ ಮೇಲೆ ಕಾರನ್ನು ಇಟ್ಟಿರುವುದಾಗಿ ತಿಳಿಸಿದ್ದಾರೆ.


Share It

You cannot copy content of this page