ದಕ್ಷಿಣ ಭಾರತ ಹಿಂದಿ ಪ್ರಚಾರ ಸಭಾ ಹಾಗೂ ಧಾರವಾಡದಲ್ಲಿನ ಗಾಂಧಿ ಹಿಂದಿ ಶಾಲೆ ಹಾಗೂ ಧಾರವಾಡದ ಇತರ ಸರ್ಕಾರ ಅನುದಾನಿತ ಶಾಲೆಗಳಲ್ಲಿ ಹಿಂದಿ ಶಿಕ್ಷಕರ ನೇಮಕಾತಿಗೆ ಅರ್ಜಿಯನ್ನು ಕರೆದಿದೆ. ಅರ್ಜಿಯನ್ನು 13-03-2023 ರ ಅನ್ವಯ ಅರ್ಜಿಯನ್ನು ಕರೆದಿದ್ದಾರೆ. ಅರ್ಜಿಯ ಅನ್ವಯ ಅರ್ಹ ಅಭ್ಯರ್ಥಿಗಳು ಅರ್ಜಿಯನ್ನು ಸಲ್ಲಿಸಬಹುದಾಗಿದೆ.
ಅರ್ಹತೆಗಳು :
ಸಾರ್ವಜನಿಕ ಶಿಕ್ಷಣ ಇಲಾಖೆ ನಿಗದಿ ಮಾಡಿರುವ ಅರ್ಹತೆಯನ್ನು ಹೊಂದಿರಬೇಕು. ಬಿ.ಎ, ಬಿ. ಇಡಿ ಹಾಗೂ ಟಿಸಿಎಚ್ ಅನ್ನು ಪೂರ್ಣಗೊಳಿಸಿರಬೇಕು.
ಸಹ ಶಿಕ್ಷಕ ಹುದ್ದೆಗೆ ವಯೋಮಿತಿ:
ಅಭ್ಯರ್ಥಿಯು ಗರಿಷ್ಠ 45 ವರ್ಷ ವಯಸ್ಸಿನ ಒಳಗೆ ಇರಬೇಕು. ಪರಿಶಿಷ್ಟ ಜಾತಿಯ ಅಭ್ಯರ್ಥಿಗೆ ಮಾತ್ರ ಅವಕಾಶ.
ವೇತನ : ರೂ.33450-62600
ಅರ್ಜಿ ಸಲ್ಲಿಸುವ ವಿಧಾನ :
ಅಭ್ಯರ್ಥಿಗಳು ತಮ್ಮ ಸ್ವ ವಿವರವುಳ್ಳ ಪತ್ರಗಳು ಹಾಗೂ ಇತರ ಅವಶ್ಯಕ ಪತ್ರಗಳನ್ನು ಕೆಳಗಿನ ವಿಳಾಸಕ್ಕೆ ಸಲ್ಲಿಸುವುದು. ಆಧಾರ ಕಾರ್ಡ್ , ಜಾತಿ ಪ್ರಮಾಣ ಪತ್ರ, ವೃತ್ತಿ ಅನುಭವ, ಇತರ ಪತ್ರಗಳನ್ನು ಸಲ್ಲಿಸುವುದು.
ವಿಳಾಸ:
ಕಾರ್ಯದರ್ಶಿಗಳು, ದಕ್ಷಿಣ ಭಾರತ ಹಿಂದಿ ಪ್ರಚಾರ ಸಭಾ (ಕರ್ನಾಟಕ) ಧಾರವಾಡ, ಡಿ.ಸಿ.ಕಂಪೌಂಡ, ಧಾರವಾಡ – 580001
ಇದರ ಜೊತೆಗೆ ಒಂದು ಪ್ರತಿಯನ್ನು ಉಪನಿರ್ದೇಶಕರು ಸಾರ್ವಜನಿಕ ಶಿಕ್ಷಣ ಇಲಾಖೆ, ಡಿ.ಸಿ. ಕಂಪೌಂಡ ಧಾರವಾಡ ಈ ವಿಳಾಸಕ್ಕೆ ನೋಂದಾಯಿತ ಅಂಚೆಯ ಮೂಲಕ ತಲುಪಿಸುವುದು. ಅರ್ಜಿದಾರರು 1000 ರೂ ಗಲನ್ನು “Secretary, Dakshina Bharat Hindi Prachar Sabha (Karnataka) Dharwad” ಹೆಸರಿನಲ್ಲಿ ಡಿಡಿ ಕಟ್ಟಬೇಕು.
ಸೂಚನೆಗಳು
ಅಭ್ಯರ್ಥಿಗಳಿಗೆ ಕಟ್ಟಿದ ಹಣವನ್ನು ಮರು ಪಾವತಿ ಮಾಡುವುದಿಲ್ಲ.
1:10 ಅನುಪಾತದಲ್ಲಿ ಸಂದರ್ಶನಕ್ಕೆ ಆಹ್ವಾನ ಪಡೆದ ಅಭ್ಯರ್ಥಿಗಳು ತಮ್ಮ ಸ್ವಂತ ಖರ್ಚಿನಲ್ಲಿ ಸಂದರ್ಶನಕ್ಕೆ ಹಾಜರಾಗಬೇಕು.
ಯಾವ ಸಮಯದಲ್ಲಿ ಬೇಕಾದರೂ ಉದ್ಯೋಗದ ನೇಮಕಾತಿ ರದ್ದಗಬಹುದು.
ಸಂದರ್ಶನದ ದಿನಾಂಕವನ್ನು ಮುಂದಿನ ದಿನದಲ್ಲಿ ತಿಳಿಸಲಾಗುವುದು.
ಹೆಚ್ಚಿನ ಮಾಹಿತಿಗೆ ಸಂಪರ್ಕಿಸಿರಿ : ವ್ಯವಸ್ಥಾಪಕರು, ಅಡಳಿತ ವಿಭಾಗ: 7204592450