ಕಲಬುರಗಿ: ವ್ಯಕ್ತಿಯನ್ನು ಪತ್ನಿಯ ಎದುರೇ ಮಾರಕಾಸ್ತ್ರಗಳಿಂದ ಹೊಡೆದು ಕೊಲೆಮಾಡಿರುವ ಘಟನೆ ಕಲಬುರಗಿ ತಾಲೂಕಿನ ಕೆಸರಟಗಿ ಗ್ರಾಮದ ಬಳಿ ನಡೆದಿದೆ.
ಕಪಿಲ್ ಗಾಯಕ್ವಾಡ್ (37) ಕೊಲೆಯಾದ ವ್ಯಕ್ತಿ. ಕಪಿಲ್ ಗಾಯಕ್ವಾಡ್ ಸೆಂಟ್ರಿಂಗ್ ಕೆಲಸ ಮುಗಿಸಿಕೊಂಡು ಕೆಸರಟಗಿಗೆ ಹೋಗುತ್ತಿದ್ದರು. ಕೆಸರಟಗಿ ಬಳಿಯ ರೈಲ್ವೆ ಅಂಡರ್ ಬ್ರೀಡ್ಜ್ ಬಳಿ ಕಪಿಲ್ ಗಾಯಕ್ವಾಡ್ ಅವರನ್ನು ಅಡ್ಡಗಟ್ಟಿ ಪತ್ನಿಯ ಮುಂದೆ ಹತ್ಯೆ ಮಾಡಲಾಗಿದೆ.
ಕೊಲೆ ಹಿಂದೆ ಕಪಿಲ್ ಗಾಯಕ್ವಾಡ್ ಪತ್ನಿ ಭಾಗ್ಯ ಕೈವಾಡವಿದೆ ಎಂದು ಮೃತನ ಕುಟುಂಬಸ್ಥರು ಆರೋಪ ಮಾಡಿ ದೂರು ದಾಖಲಿಸಿದ್ದಾರೆ.