ಬೆಂಗಳೂರು: ರಮ್ಯಾ ವರ್ಸಸ್ ದರ್ಶನ್ ಫ್ಯಾನ್ಸ್ ಮಧ್ಯೆ ನಾವು ಡ್ಯಾನ್ಸ್ ಆಡೋಕೆ ಬಂದಿಲ್ಲ, ಒಬ್ಬ ಮಹಿಳೆಗೆ ಅವಮಾನವಾಗಿದೆ. ಹೀಗಾಗಿ, ನಾವು ರಮ್ಯಾ ಪರ ನಿಲ್ತೇವೆ ಎಂದು ಕರ್ನಾಟಕ ಮಹಿಲಾ ಕಾಂಗ್ರೆಸ್ ಅಧ್ಯಕ್ಷೆ ಸೌಮ್ಯಾ ರೆಡ್ಡಿ ತಿಳಿಸಿದ್ದಾರೆ.
ರಮ್ಯಾ ವರ್ಸಸ್ ದರ್ಶನ್ ಫ್ಯಾನ್ಸ್ ಪ್ರಕರಣದ ಕುರಿತು ಮಾಧ್ಯಮಗಳು ಕೇಳಿದ ಪ್ರಶ್ಮೆಗೆ ಖಾರವಾಗಿಯೇ ಉತ್ತರಿಸಿದ ಅವರು, ದರ್ಶನ್ ಫ್ಯಾನ್ಸ್ ಮತ್ತು ರಮ್ಯಾ ನಡುವೆ ನಾವು ಡ್ಯಾನ್ಸ್ ಆಡೋಕೆ ಬಂದಿಲ್ಲ. ನೀವು ಕೂಡ ಈ ಡ್ಯಾನ್ಸ್ ಆಡೋದು ನಿಲ್ಲಿಸಿ. ಒಬ್ಬ ಮಹಿಳೆಗೆ ಅವಮಾನವಾಗಿದೆ. ಹೀಗಾಗಿ, ನಾವೆಲ್ಲರೂ ಮಹಿಳೆಯ ಪರ ನಿಂತಿದ್ದೇವೆ ಎಂದು ತಿಳಿಸಿದ್ದಾರೆ.
ಮಹಿಳೆಯರ ಮೇಲೆ ಇಂತಹ ಯಾವುದೇ ಅವಮಾನಕಾರ ದಾಳಿ ನಡೆದಾಗ ಬಿಜೆಪಿ ನಾಯಕರು ಅವರನ್ನು ಮತ್ತಷ್ಟು ಕುಗ್ಗಿಸುವ ಪ್ರಯತ್ನ ಮಾಡುತ್ತಾರೆ. ಮಹಿಳೆಯರಿಗೆ ಅವರು ಯಾವ ರೀತಿ ಮರ್ಯಾದೆ ಕೊಡ್ತಾರೆ ಎಂಬುದು ಇತ್ತೀಚಿನ ಪ್ರಕರಣ ಗಳಲ್ಲಿ ನೋಡಿದ್ದೇವೆ. ಹೀಗಾಗಿ ದೇಶಾದ್ಯಂತ ಯಾವುದೇ ಮಹಿಳೆಗೆ ಅವಮಾನವಾದ್ರೂ ನಾವು ಅವರ ಪರ ನಿಲ್ತೇವೆ. ಇಲ್ಲಿ ದರ್ಶನ್ ಫ್ಯಾನ್ಸ್ ಅಂತ ಏನಿಲ್ಲ. ಯಾರಾದರೂ ಸರಿ ಮಹಿಳೆಗೆ ಗೌರವ ಕೊಡುವುದನ್ನು ಕಲಿಯಬೇಕು. ಇಲ್ಲವಾದಲ್ಲಿ ಕಾನೂನಿನ ಶಿಕ್ಷೆಗೆ ಒಳಗಾಗಲೇಬೇಕು ಎಂದು ಎಚ್ಚರಿಸಿದರು.