ಬೆಂಗಳೂರು: ಸಾಮಾಜಿಕ, ಆರ್ಥಿಕ ಮತ್ತು ಶೈಕ್ಷಣಿಕ ಸಮೀಕ್ಷೆ ಮುಗಿಯದ ಹಿನ್ನೆಲೆ ಸರ್ಕಾರ ಅವಧಿ ವಿಸ್ತರಣೆ ಮಾಡಿ ಸರ್ಕಾರ ಆದೇಶ ಹೊರಡಿಸಿದೆ. ಅಕ್ಟೋಬರ್ 12 ರವರೆಗೆ ಸಮೀಕ್ಷೆ ದಿನಾಂಕ ವಿಸ್ತರಣೆ ಮಾಡಲಾಗಿದೆ. ಬೆಂಗಳೂರಿನಲ್ಲಿ ಅಕ್ಟೋಬರ್ 24 ರವರೆಗೆ ಸಮೀಕ್ಷೆ ವಿಸ್ತರಣೆ ಆಗಲಿದೆ ಎಂದು ಆದೇಶದಲ್ಲಿ ತಿಳಿಸಿಲಾಗಿದೆ.
ಜಾತಿಗಣತಿ ಸಮೀಕ್ಷೆಯ ಹಿನ್ನೆಲೆ ರಾಜ್ಯದಾದ್ಯಂತ ಶಾಲಾ ಸಮಯದಲ್ಲೂ ಬದಲಾವಣೆ ಆಗಲಿದೆ. ಸೆಪ್ಟೆಂಬರ್ 22 ರಂದು ಜಾತಿ ಗಣತಿ ಸಮೀಕ್ಷೆ ಆರಂಭವಾಗಿತ್ತು. ಆರಂಭವಾಗಿ 14 ದಿನ ಕಳೆದಿದೆ. ಗಣತಿಗೆ ರಾಜ್ಯ ಸರ್ಕಾರ ಅಕ್ಟೋಬರ್ 7ರ ತನಕ ಡೆಡ್ಲೈನ್ ಕೊಟ್ಟಿತ್ತು. ಸರ್ಕಾರಕ್ಕೆ ಕೊಟ್ಟ ಈ ಗಡುವು ಇಂದಿಗೆ ಮುಗಿದೆ.
ಸಮೀಕ್ಷೆ ಇನ್ನು ಬಾಕಿ ಉಳಿದ ಹಿನ್ನೆಲೆ ಬೆಂಗಳೂರು ಹೊರತುಪಡಿಸಿ ವಿವಿಧ ರಾಜ್ಯದಲ್ಲಿ ಅ.12ರವರೆಗೆ ಸಮೀಕ್ಷೆ ದಿನಾಂಕ ವಿಸ್ತರಣೆ ಮಾಡಲಾಗಿದೆ. ಹೀಗಾಗಿ ಅಕ್ಟೋಬರ್ ೮ ರಿಂದ ಶಾಲಾ ತೆರೆಯುವ ಸಮಯದಲ್ಲೂ ಕೆಲ ಬದಲಾವಣೆ ಮಾಡಲಾಗಿದೆ.
ರಾಜ್ಯದಾದ್ಯಂತ ಸರ್ಕಾರಿ ಮತ್ತು ಸರ್ಕಾರಿ ಅನುದಾನಿತ ಶಾಲೆಗಳಲ್ಲಿ ಅ. 8 ರಿಂದ ಬೆಳಿಗ್ಗೆ 8 ತರಗತಿಗಳು ಶುರುವಾಗಲಿದೆ. ಮಧ್ಯಾಹ್ನ 1 ಗಂಟೆ ಶಾಲೆ ಮುಗಿಯಲಿದ್ದು, ಮಕ್ಕಳಿಗೆ ಮಧ್ಯಾಹ್ನದ ಬಳಿಕ ರಜೆ ಇರಲಿದೆ. ನಂತರದ ಅವಧಿಯಲ್ಲಿ ಶಿಕ್ಷಕರು ಸಮೀಕ್ಷಾ ಕಾರ್ಯದಲ್ಲಿ ಭಾಗಿ ಆಗಬೇಕು. ಸಮೀಕ್ಷೆಯನ್ನು ರಜಾ ದಿನಗಳಲ್ಲಿಯೂ ಕೈಗೊಳ್ಳುವಂತೆ ಆದೇಶಿಸಲಾಗಿದೆ.
ಮಧ್ಯಾಹ್ನ ಶಿಕ್ಷಕರ ಸಮಯ ಸಮೀಕ್ಷೆಗೆ ಮೀಸಲಿಡಬೇಕಿದೆ. ಮಧ್ಯಾಹ್ನದ ಬಳಿಕ ಶಾಲೆಗಳಿಗೆ ರಜೆ ಇರಲಿದೆ. ಬೆಳಗ್ಗೆ 8 ರಿಂದ 1 ಗಂಟೆವರೆಗೆ ತರಗತಿಗಳು ಇರಲಿದ್ದು, ಬಳಿಕ ಸಮೀಕ್ಷೆ ಜವಾಬ್ದಾರಿಗೆ ಶಿಕ್ಷಕರು ತೆರಳಲಿದ್ದಾರೆ. ಎಂದು ಶಾಲಾ ಶಿಕ್ಷಣ ಇಲಾಖೆ ಆಯುಕ್ತ ಸೂರಲ್ಕರ್ ವಿಕಾಶ್ ಕಿಶೋರ್ ಮಾಹಿತಿ ನೀಡಿದ್ದಾರೆ.