ಡೆವಿಲ್ ಬಿಡುಗಡೆಗೆ ಕ್ಷಣಗಣನೆ: ರಾಜ್ಯಾದ್ಯಂತ ಅಭಿಮಾನಿಗಳ ಸಂಭ್ರಮ
ಬೆಂಗಳೂರು: ದರ್ಶನ್ ಜೈಲಿನಲ್ಲಿರುವ ಸಂದರ್ಭದಲ್ಲಿ ಡೆವಿಲ್ ಸಿನಿಮಾ ಬಿಡುಗಡೆ ಯಾಗಲಿದ್ದು, ಅಭಿಮಾನಿಗಳಲ್ಲಿ ಸಂಭ್ರಮ ಮನೆ ಮಾಡಿದೆ.
ರಾಜ್ಯದ ಎಲ್ಲ ಜಿಲ್ಲೆಗಳಲ್ಲಿ ಸಿನಿಮಾ ಬಿಡುಗಡೆಗೆ ಅಭಿಮಾನಿಗಳು ಕಾದು ಕುಳಿತಿದ್ದಾರೆ. ಥಿಯೇಟರ್ ಮುಂದೆ ಪೋಸ್ಟರ್, ಕಟೌಟ್ ಗಳನ್ನು ಕಟ್ಟಿಕೊಂಡು ನೆನ್ನೆಯಿಂದಲೇ ಅಭಿಮಾನಿಗಳು ಕಾಯುತ್ತಿದ್ದಾರೆ. ಇಂದು ಸಿನಿಮಾ ಬಿಡುಗಡೆಯಾಗಲಿದ್ದು, ಸಿನಿಮಾ ಬಿಡುಗಡೆಗಾಗಿ ಕಾಯುವಿಕೆ ನಡೆದಿದೆ.
ಡಿವಿಲ್ ಚಿತ್ರೀಕರಣಕ್ಕೆ ಮೊದಲೇ ನಟ ದರ್ಶನ್ ಕೊಲೆ ಪ್ರಕರಣದಲ್ಲಿ ಜೈಲು ಸೇರಿದ್ದರು. ಅನಂತರ ಜಾಮೀನಿನ ಮೇಲೆ ಬಂದು ಡೆವಿಲ್ ಶೂಟಿಂಗ್ ಮುಗಿಸಿದ್ದರು. ಇದೀಗ ಜಾಮೀನು ರದ್ದಾಗಿ ದರ್ಶನ್ ಪರಪ್ಪನ ಅಗ್ರಹಾರ ಜೈಲಿನಲ್ಲಿದ್ದಾರೆ. ಈ ನಡುವೆ ಸಿನಿಮಾ ಬಿಡುಗಡೆಯಾಗುತ್ತಿದೆ.


