200% ಜನವರಿಯಲ್ಲಿ ಡಿಕೆಶಿ ಸಿಎಂ ಆಗೇ ಆಗ್ತಾರೆ: ಆಪ್ತ ಶಾಸಕನ ಆತ್ಮವಿಶ್ವಾಸ !
ಬೆಂಗಳೂರು: ಸಿಎಂ ಸ್ಥಾನದ ಕುರಿತು ಯಾವುದೇ ಗೊಂದಲದ ಹೇಳಿಕೆ ನೀಡಿದಂತೆ ತಾಕೀತು ಮಾಡಿದ್ದರೂ, ಡಿಕೆಶಿ ಜನವರಿಗೆ ಸಿಎಂ ಆಗೇ ಆಗ್ತಾರೆ ಎನ್ನುವ ಆಪ್ತ ಶಾಸಕರ ಆತ್ಮವಿಶ್ವಾಸ ಮಾತ್ರ ಕಡಿಮೆ ಆಗಿಲ್ಲ.
ಡಿಕೆಶಿ ಆಪ್ತ ವಲಯದಲ್ಲಿ ಗುರುತಿಸಿಕೊಂಡಿರುವ, ಆಗಾಗ ಡಿಕೆ ಸಿಎಂ ಆಗೇ ಆಗ್ತಾರೆ ಎಂದು ಹೇಳಿಕೆ ಕೊಡುವ ರಾಮನಗರ ಶಾಸಕ ಇಕ್ಬಾಲ್ ಹುಸೇನ್, ನೋಡ್ತಾ ಇರಿ, ಜನವರಿ 6 ಅಥವಾ9 ಕ್ಕೆ ಡಿಕೆಶಿ ಸಿಎಂ ಆಗೇ ಆಗ್ತಾರೆ ಡಂಬ ಆತ್ಮವಿಶ್ವಾಸದ ಹೇಳಿಕೆ ನೀಡಿದ್ದಾರೆ.
ಕೆಲವರು ಮಳೆ ಬರುತ್ತೆ, ನೈಸರ್ಗಿಕ ವಿಕೋಪಗಳಾಗುತ್ತೆ ಎಂದು ಭವಿಷ್ಯ ನುಡಿಯುವುದಿಲ್ವಾ, ಅದೇ ರೀತಿ ಜನವರಿ6 ಅಥವಾ 9 ಕ್ಕೆ ಡಿಕೆಶಿ ಸಿಎಂ ಆಗ್ತಾರೆ ಎಂಬುದು ನನ್ನ ನಂಬಿಕೆ. ನಮಗೆ ದೇವರ ಮೇಲೆ ನಂಬಿಕೆ ಇದೆ. ಇದು ನಡೆದೇ ನಡೆಯುತ್ತೆ. 200℅ ಡಿಕೆಶಿ ಅವ್ರು ಜನವರಿಯಲ್ಲಿ ಸಿಎಂ ಆಗೇ ಆಗ್ತಾರೆ ಎಂದಿದ್ದಾರೆ.


