ಪೊಲೀಸ್ ಇನ್ಸ್ ಪೆಕ್ಟರ್ ವಿರುದ್ಧ ಎಫ್ಐಆರ್ ದಾಖಲು

Share It

ಬೆಂಗಳೂರು: ಪೊಲೀಸ್ ಇನ್ಸ್ ಪೆಕ್ಟರ್ ಹಿತೇಂದ್ರ ಎಂ.ಎಸ್ ವಿರುದ್ಧ ಬೆಂಗಳೂರಿನ ಜೆ.ಪಿ.ನಗರ ಪೊಲೀಸ್ ಠಾಣೆಯಲ್ಲಿ ಎಫ್‌ಐಆರ್ ದಾಖಲಾಗಿದೆ.

ಹಿತೇಂದ್ರ ಅವರು ಜುಲೈ 2016 ರಿಂದ ಫೆಬ್ರವರಿ 2019 ರವರೆಗೆ ಜೆಪಿ ನಗರ ಪೊಲೀಸ್ ಠಾಣೆಯ ಇನ್ಸ್‌ಪೆಕ್ಟರ್ ಆಗಿ ಸೇವೆ ಸಲ್ಲಿಸಿದ್ದು, ಈ ವೇಳೆ ಕೆಲ ಪ್ರಕರಣಗಲಲ್ಲಿ ವಶಪಡಿಸಿಕೊಂಡಿದ್ದ ವಸ್ತುಗಳನ್ನು ವಾಪಾಸ್ ನೀಡದೇ ದುರುಪಯೋಗಿಸಿಕೊಂಡಿರುವುದು ಬೆಳಕಿಗೆ ಬಂದಿದೆ.

24 ಪ್ರಕರಣಗಳಲ್ಲಿ ವಶಪಡಿಸಿಕೊಂಡಿದ್ದ ಆಭರಣಗಳು, ಪೆನ್‌ಡ್ರೈವ್‌ಗಳು, ಮೊಬೈಲ್ ಫೋನ್‌ಗಳು, ಸಿಡಿ ಮತ್ತು ಹಿಂದಿನ ಇನ್ಸ್ ಪೆಕ್ಟರ್ ಹಸ್ತಾಂತರಿಸಿದ್ದ ಮಾಲು ಸಹ ಠಾಣೆಗೆ ಹಾಜರುಪಡಿಸಿರಲಿಲ್ಲ.

ವಶಪಡೆದ ಮಾಲನ್ನು ಹಿಂತಿರುಗಿಸುವ ಬಗ್ಗೆ ಹಲವಾರು ಬಾರಿ ಹೇಳಲಾಗಿತ್ತು. ಅಲ್ಲದೇ ಈ ಬಗ್ಗೆ ದಕ್ಷಿಣ ವಿಭಾಗದ ಡಿಸಿಪಿ ಜ್ಞಾಪನಾ ಪತ್ರ ನೀಡಿದರೂ ಉತ್ತರಿಸಿರಲಿಲ್ಲ. ಹೀಗಾಗಿ ಪ್ರಕರಣಗಳ ಮಾಲನ್ನ ಹಿಂತಿರುಗಿಸದೆ ದುರುಪಯೋಗಿಸಿಕೊಂಡಿರೋದು ಬೆಳಕಿಗೆ ಬಂದಿದೆ.

ಈ ಹಿನ್ನೆಲೆಯಲ್ಲಿ ಜೆಪಿ ನಗರ ಪೊಲೀಸ್ ಠಾಣೆಯ ಮಾಜಿ ಇನ್ಸ್ ಪೆಕ್ಟರ್ ವಿರುದ್ದ ಹಾಲಿ ಇನ್ಸ್ ಪೆಕ್ಟರ್ ರಾಧಾಕೃಷ್ಣ ಅವರು ಎಫ್​ಐಆರ್ ದಾಖಲಿಸಿದ್ದಾರೆ.


Share It

You May Have Missed

You cannot copy content of this page