ಕ್ರೀಡೆ ಸುದ್ದಿ

ಕೆಮರೂನ್ ಗ್ರೀನ್ ಐಪಿಎಲ್ ನಿಂದ ಆಗ್ತಾರಾ ಬ್ಯಾನ್ ?

Share It

ಆಸ್ಟ್ರೇಲಿಯಾದ ಆಲ್ ರೌಂಡರ್ ಕೆಮರೂನ್ ಗ್ರೀನ್ ಬೆನ್ನು ಮೂಳೆ ಇಂಜೂರಿ ಇಂದ ಆಸ್ಟ್ರೇಲಿಯಾದಲ್ಲಿ ನೆಡೆಯಲಿರುವ ಬಾರ್ಡರ್ ಗವಾಸ್ಕರ್ ಟ್ರೊಫಿಯ 5 ಪಂದ್ಯಗಳ ಟೆಸ್ಟ್ ಸರಣಿಯಿಂದ ಹೊರಗೂಳಿದಿದ್ದಾರೆ.
ಇದಲ್ಲದೆ ಮುಂಬರುವ ಚಾಂಪಿಯನ್ಸ್ ಟ್ರೋಫಿಯಿಂದ ಕೂಡ ಹೊರಗುಳಿಯಬಹುದು ಎಂಬ ಅನುಮಾನಗಳು ಸೃಷ್ಟಿಯಾಗಿವೆ.

ಈ ಹಿಂದೆ ಅವರು ಕಿಡ್ನಿ ಸಂಬಂಧಪಟ್ಟ ಖಾಯಿಲೆಯಿಂದ ಚೇತರಿಸಿಕೊಂಡ ಕೆಲವುದಿನಗಳಲ್ಲಿಯೇ ಮತ್ತೆ ಅವರಲ್ಲಿ ಬೆನ್ನು ಮೂಳೆ ಸಮಸ್ಯೆ ಎದುರಾಗಿರುವುದರಿಂದ ಅವರು  ಬೆನ್ನು ಮೂಳೆ ಸರ್ಜರಿಗೆ ಮುಂದಾಗಿದ್ದಾರೆ.

ಹಲವು ವರದಿಗಳ ಪ್ರಕಾರ ಸರ್ಜರಿ ಬಳಿಕ ಇವರು ಮತ್ತೆ ಮೈದಾನಕ್ಕಿಳಿಯಲು 6 ತಿಂಗಳು ತೆಗೆದುಕೊಳ್ಳಬಹುದು. ಆ ಕಾರಣದಿಂದ ಗ್ರೀನ್ 2025ರ ಐಪಿಎಲ್ ನಲ್ಲಿ ಕಾಣಿಸಿಕೊಳ್ಳುವುದು ಸಹ ಬಹುತೇಕ ಅನುಮಾನವಾಗಿದೆ.

2025 ರ ಐಪಿಎಲ್ ಮೆಗಾ ಹರಾಜಿಗೂ ಮುನ್ನವೇ ಐಪಿಎಲ್ ಗೌರ್ನಿಂಗ್ ಕೌನ್ಸಿಲ್  ಮಿನಿ ಹರಾಜಿನಲ್ಲಿ ಬರುವ ವಿದೇಶಿ ಆಟಗಾರರಿಗೆ ಮತ್ತು ಐಪಿಎಲ್ ತಂಡಗಳಿಗೆ ಅರ್ಧಕ್ಕೆ ಕೈ ಕೊಟ್ಟು ತನ್ನ ದೇಶಕ್ಕೆ ಹಿಂತಿರುಗುವ ಆಟಗಾರರಿಗೆ ಕಟ್ಟುನಿಟ್ಟಾದ ನಿಯಮವನ್ನು ಜಾರಿಗೆ ತಂದಿದೆ. ಈ ಕಾರಣದಿಂದ ಕೆಮರೂನ್ ಗ್ರೀನ್ 2025ರ ಐಪಿಎಲ್ ನಲ್ಲಿ ಹೆಸರು ನೋಂದಾಯಿಸಿ ಅನುಮಾನವಾಗಿದೆ.

ಒಂದು ವೇಳೆ ಹೆಸರು ನೋಂದಾಯಿಸಿಕೊಂಡರೂ ಸಹ ಈಗ ಹೊಸದಾಗಿ ಜಾರಿಗೆ ಬಂದಿರುವ ನಿಯಮಗಳ ಪ್ರಕಾರ ಯಾವ ವಿದೇಶಿ ಆಟಗಾರರೂ ಸಹ ಐಪಿಎಲ್ ತಂಡಗಳಿಗೆ ಅರ್ಧಕ್ಕೆ ಕೈ ಕೊಟ್ಟು ಹೋಗುವಂತಿಲ್ಲ ಪೂರ್ಣ ಭಾಗದ ಐಪಿಎಲ್ ಕೂಡ ಆಡಬೇಕಾಗುತ್ತದೆ.


Share It

You cannot copy content of this page