ಅಗರ್ತಲಾ: ಅಸ್ಸಾಂನಲ್ಲಿ ಅಗರ್ತಲಾದಲ್ಲಿ ಲೋಕಮಾನ್ಯ ತಿಲಕ್ ಎಕ್ಸ್ಪ್ರೆಸ್ ರೈಲಿನ 8 ಬೋಗಿಗಳು ಹಳಿ ತಪ್ಪಿದ್ದು, ಅದೃಷ್ಟವಶಾತ್ ಯಾವುದೇ ಪ್ರಾಣಾಯಾಮ ಆಗಿಲ್ಲ ಎಂದು ವರದಿಯಾಗಿದೆ.
ಗಾಯಾಳುಗಳ ಪತ್ತೆಗೆ ಭಾರತೀಯ ರೈಲ್ವೆ
ಸಹಾಯವಾಣಿ ಸಂಖ್ಯೆಗಳನ್ನು ಬಿಡುಗಡೆ ಮಾಡಿದೆ.
ಗುರುವಾರ ಸಂಜೆ 4 ಗಂಟೆ ವೇಳೆಯಲ್ಲಿ ಲುಮ್ಡಿಂಗ್-ಬರ್ದಾರ್ಪುರ ಹಿಲ್ ವಿಭಾಗದಲ್ಲಿ ಲುಮ್ಡಿಂಗ್ ವಿಭಾಗದ ಅಡಿಯಲ್ಲಿ ಈ ಘಟನೆ ಸಂಭವಿಸಿದ್ದು, ಅಗರ್ತಲಾ-ಲೋಕಮಾನ್ಯ ತಿಲಕ್ ಟರ್ಮಿನಸ್ ಎಕ್ಸ್ಪ್ರೆಸ್ನ 8 ಬೋಗಿಗಳು ಅಸ್ಸಾಂನ ದಿಬಾಲಾಂಗ್ ನಿಲ್ದಾಣದಲ್ಲಿ ಹಳಿತಪ್ಪಿವೆ ಎಂದು ರೈಲ್ವೆ ಇಲಾಖೆ ವಕ್ತಾರರು ತಿಳಿಸಿದ್ದಾರೆ.
ಪವರ್ ಕಾರ್ ಮತ್ತು ರೈಲಿನ ಇಂಜಿನ್ ಸೇರಿ 8 ಕೋಚ್ಗಳು ಹಳಿ ತಪ್ಪಿವೆ ಎಂದು ಅವರು ಹೇಳಿದ್ದಾರೆ. ಲುಮ್ಡಿಂಗ್-ಬದರ್ಪುರ ಸಿಂಗಲ್ ಲೈನ್ ವಿಭಾಗದಲ್ಲಿ ರೈಲುಗಳ ಓಡಾಟವನ್ನು ಸ್ಥಗಿತಗೊಳಿಸಲಾಗಿದೆ ಎಂದು ಅವರು ತಿಳಿಸಿದ್ದಾರೆ.
ಪವರ್ ಕಾರ್ ಮತ್ತು ಇಂಜಿನ್ ಸೇರಿದಂತೆ ಹಲವಾರು ಕೋಚ್ಗಳು ಟ್ರ್ಯಾಕ್ನಿಂದ ಹೊರಬಿದ್ದಿವೆ. ಆದರೆ ಯಾವುದೇ ಸಾವುನೋವುಗಳು ಅಥವಾ ಹೆಚ್ಚಿನ ಗಾಯಗಳು ವರದಿಯಾಗಿಲ್ಲ ಎಂದು ತಿಳಿದುಬಂದಿದೆ