ಬೆಂಗಳೂರು ಮಹಾನಗರ ಸಾರಿಗೆ ಕರ್ನಾಟಕದ SC ST ಹಾಗೂ ಗಿರಿಜನ ಯೋಜನೆಯ ಅಡಿಯಲ್ಲಿ ಪರಿಶಿಷ್ಟ ಜಾತಿ ಪರಿಶಿಷ್ಟ ಪಂಗಡ ಹಾಗೂ ಗಿರಿಜನ ಅಭ್ಯರ್ಥಿಗಳಿಗೆ ಲಘು ಮತ್ತು ಭಾರಿ ವಾಹನಗಳ ಚಾಲನೆ ತರಬೇತಿಯನ್ನು ನೀಡಲು ನಿರ್ಧರಿಸಿದೆ. ಅಭ್ಯರ್ಥಿಗಳಿಗೆ ಉಚಿತ ವಸತಿ ಅಥವಾ ವಸತಿ ರಹಿತ ಸೇವೆಗಳನ್ನು ನೀಡಲಾಗುತ್ತದೆ.
ಈ ಯೋಜನೆಯನ್ನು ಪಡೆಯಲು ಅಭ್ಯರ್ಥಿಗಳು ಹೊಂದಿರಬೇಕಾದ ಅರ್ಹತೆಗಳು ಮತ್ತು ಪಡೆಯುವ ವಿಧಾನವನ್ನು ಈ ಕೆಳಗಿನಂತೆ ನೋಡಬಹುದು.
ವಯೋಮಿತಿ :
ಕನಿಷ್ಠ 18 ವರ್ಷ ಹಾಗೂ ಗರಿಷ್ಠ 45 ವರ್ಷ. ಜೊತೆಗೆ ಲಘು ವಾಹನ ಚಾಲನಾ ಅನುಜ್ಞಾಪತ್ರ ಪಡೆದು ಒಂದು ವರ್ಷ ಪೂರ್ಣಗೊಂಡಿರಬೇಕು. ಅರ್ಜಿಯ ದಿನಾಂಕಕ್ಕೆ ಇದು ಪೂರ್ಣವಾಗಿರಬೇಕು.
ಅರ್ಜಿ ಸಲ್ಲಿಸಲು ಬೇಕಾದ ದಾಖಲೆಗಳು :
ಆಧಾರ ಕಾರ್ಡ್
ಜಾತಿ ಪ್ರಮಾಣ ಪತ್ರ
ಪಾಸ್ ಪೋರ್ಟ್ ಅಳತೆಯ ಭಾವಚಿತ್ರ 5
ಮುಖ್ಯಾಂಶ :
ಮೊದಲು ಬಂದವರಿಗೆ ಮೊದಲ ಆದ್ಯತೆ. ಆಯ್ಕೆಯಾದ ಅಭ್ಯರ್ಥಿಗಳಿಗೆ ವಸತಿ ಸೌಲಭ್ಯವನ್ನು ನೀಡಲಾಗುವುದು. ಜೊತೆಗೆ ಊಟ ಇತರೆ ಸೌಕರ್ಯ ನೀಡಲಾಗುವುದು.
ಅಭ್ಯರ್ಥಿಗಳು ಸೇವಾ ಸಿಂಧುವಿನ ಮೂಲಕ ಅರ್ಜಿಯನ್ನು ಸಲ್ಲಿಸಬಹುದು. ಅರ್ಜಿಯನ್ನು ಸಲ್ಲಿಸಲು ಇಲ್ಲಿ ಕ್ಲಿಕ್ ಮಾಡಿ. (https://sevasindhuservices.karnataka.gov.in)
ಅರ್ಜಿ ಸಲ್ಲಿಕೆಯ ಕುರಿತು ವಿಚಾರಣೆ ಮಾಡುವುದಕ್ಕಾಗಿ ಈ ನಂಬರ್ ಗೆ ಕರೆ ಮಾಡಿ 08022279954, 8792662814/ 8792662816, ಸರ್ಕಾರಿ ರಜೆ ದಿನ ರಜೆ ಇರುತ್ತದೆ.
ತರಬೇತಿಗೆ ಸಂಬಂಧಿಸಿದಂತೆ ಹೆಚ್ಚಿನ ಮಾಹಿತಿ ಪಡೆಯಲು ಈ ವೆಬ್ ಸೈಟ್ ಗೆ ಭೇಟಿ ನೀಡಿ http://www.mybmtc.gov.in. ಅಥವಾ ದೂರವಾಣಿ ಸಂಖ್ಯೆ: 6364858520 / 7760991085 ಕರೆ ಮಾಡಬಹುದು.
ಅಭ್ಯರ್ಥಿಗಳು ತರಬೇತಿಗೆ ಹೋಗುವಾಗ ಎಲ್ಲ ದಾಖಲೆಗಳು ಮತ್ತು ಅರ್ಜಿಯನ್ನು ಪ್ರಿಂಟ್ ತೆಗೆದುಕೊಂಡು ಹೋಗುವುದು.