ಜೊಲ್ಲೆ ಮಗನ ಜಮೀನಿನ ಮೇಲೆ ವಕ್ಫ್ ಕಣ್ಣು
ಬೆಳಗಾವಿ: ಜಿಲ್ಲೆಯ ಪ್ರತಿಷ್ಠಿತ ಜೊಲ್ಲೆ ಕುಟುಂಬದ ಮೇಲೆ ಇದೀಗ ವಕ್ಫ್ ಕಣ್ಣು ಹಾಕಿದೆ.
ನಿಪ್ಪಾಣಿ ಬಿಜೆಪಿ ಶಾಸಕಿ ಹಾಗೂ ಮಾಜಿ ಸಚಿವರು ಆಗಿರುವ ಶಶಿಕಲಾ ಜೊಲ್ಲೆ ಮತ್ತು ಚಿಕ್ಕೋಡಿಯ ಮಾಜಿ ಸಂಸದ ಅಣ್ಣಾ ಸಾಹೇಬ್ ಜೊಲ್ಲೆ ದಂಪತಿಯ ಮಗ ಬಸವ ಪ್ರಭು ಜೊಲ್ಲೆ ಹೆಸರಿನಲ್ಲಿರುವ ಜಮೀನು ಈಗ ವಕ್ಫ್ ಹೆಸರಲ್ಲಿ ನೋಂದಣಿಯಾಗಿರುವುದು ಬೆಳಕಿಗೆ ಬಂದಿದೆ. ಜೊತೆಗೆ ಕುಟುಂಬದ ಹಲವರ ಜಮೀನಿನ ಹೆಸರು ವಕ್ಫ್ ಹೆಸರಲ್ಲಿ ನಮೂದಾಗಿದೆ.
ಯಕ್ಸಂಬಾದ ರೈತರ ಹಲವು ಜಮೀನುಗಳು ವಕ್ಫ್ ಹೆಸರಿನಲ್ಲಿ ಪತ್ತೆಯಾಗಿವೆ ಎಂಬ ಮಾಹಿತಿ ದೊರಕಿದೆ.