ಭೂ ಪರಿವರ್ತನೆ ಈಗ ಇನ್ನಷ್ಟು ಸರಳ : ಸರಕಾರದ ಭೂ ಕಂದಾಯ ಕಾಯ್ದೆಗೆ ಅಂತಿಮ ಅಧಿಸೂಚನೆ

Share It

ಬೆಂಗಳೂರು: ಭೂ ಪರಿಚರ್ತನೆ ನಿಯಮಗಳನ್ನು ಮತ್ತಷ್ಟು ಸರಳೀಕರಣಗೊಳಿಸುವ ಕರ್ನಾಟಕ ಭೂ ಕಂದಾಯ ಕಾಯ್ದೆ 1964ರ ತಿದ್ದುಪಡಿಗೆ ಡಿಸೆಂಬರ್‌ 23 ರಂದು ಅಂತಿಮ ಅಧಿಸೂಚನೆ ಹೊರಡಿಸಲಾಗಿದೆ.

ಕರ್ನಾಟಕ ಭೂ ಕಂದಾಯ ಕಾಯ್ದೆ 1964 ಕಲಂ 95ರ ತಿದ್ದುಪಡಿಗೆ ಹೊರಡಿಸಲಾಗಿರುವ ಅಧಿಸೂಚನೆಯಲ್ಲಿ ಸೇರಿಸಿರುವ ಕಳೆದ 2-3 ವರ್ಷಗಳಲ್ಲಿ ತರಲಾದ ಕಾನೂನಿನ ತಿದ್ದುಪಡಿಗಳನ್ನು ಸಂವಾದಿಯಾಗಿ ಕೆಲ ನಿಯಮಗಳನ್ನು ರಚಿಸಲಾಗಿದೆ.

⁠ಕಳೆದ 2 ವರ್ಷದಲ್ಲಿ ಭೂ ಕಂದಾಯ ಕಾಯ್ದೆ 1964ರ ವಿವಿಧ ಕಲಂಗಳಿಗೆ ತಿದ್ದುಪಡಿ ತಂದು ಕರ್ನಾಟಕ ರಾಜ್ಯದಲ್ಲಿ ಪ್ರಗತಿ ಪಥದತ್ತ ಹಾಗೂ ಸಾರ್ವಜನಿಕರಿಗೆ ಜನಸ್ನೇಹಿ ಆಡಳಿತಕ್ಕೆ ನಾಂದಿ ಹಾಡಲು ಪ್ರಯತ್ನಿಸಲಾಗಿದ್ದು, 47 ಕಲಂಗಳಿಗೆ 9 ತಿದ್ದುಪಡಿ ತರಲಾಗಿದೆ.

⁠ಕರ್ನಾಟಕ ಭೂ ಕಂದಾಯ ನಿಯಮಗಳು 1966 ಅನ್ನುಸಮಗ್ರವಾಗಿ 56 ವರ್ಷಗಳ ತರುವಾಯ 44 ನಿಯಮಗಳಿಗೆ ತಿದ್ದುಪಡಿ ತರಲಾಗಿದ್ದು, 1974ರಲ್ಲಿ ದೇವರಾಜು ಅರಸು ಭೂ ಸುಧಾರಣಾ ಕಾಯ್ದೆ 1961ಕ್ಕೆ 145 ಕಡೆ ತಿದ್ದುಪಡಿ ತಂದು ಕಾನೂನಿಗೆ ಸ್ವಾತಂತ್ರ್ಯ ನೀಡಲಾಗಿತ್ತು. ಅದಾದ ಬಳಿಕ ಸಮಗ್ರ ತಿದ್ದುಪಡಿ ತಂದಿರುವುದು ಇದೇ ಮೊದಲು ಎನ್ನಬಹುದು.

⁠ಈ ತಿದ್ದುಪಡಿ ಮೂಲಕ ಕಂದಾಯ ನ್ಯಾಯಾಲಯಗಳನ್ನು ಪಾರದರ್ಶಕವಾಗಿ, ನಿಯಮಬದ್ಧವಾಗಿ ನಡೆಸಲು ಹಾಗೂ ಸಾರ್ವಜನಿಕರಿಗೆ ಸರಳ- ಸುಲಲಿತ ನ್ಯಾಯದಾನ ನೀಡಲು ಬದ್ಧವಾಗಿದೆ.

⁠ಭೂ ಪರಿವರ್ತನೆ ಸರಳೀಕೃತವಾಗಿ ಪ್ರಕ್ರಿಯೆಗೊಳಪಡಿಸಿ ರಾಜ್ಯವನ್ನು ಅಭಿವೃದ್ಧಿ ಪಥದತ್ತ ಸಾಗಿಸಲು ಹಾಗೂ ಬಂಡವಾಳ ಹೂಡಿಕೆಗೆ ಹೂಡಿಕೆದಾರರ ಸ್ನೇಹಿಯಾಗಿ ಖರೀದಿಸಲಾದ ಭೂಮಿಗೆ ಭೂ ಪರಿವರ್ತನೆ ನೀಡಲು ಈ ತಿದ್ದುಪಡಿ ತರಲಾಗಿದೆ ಎಂದು ಕಂದಾಯ ಸಚಿವ ಕೃಷ್ಣ ಬೈರೇಗೌಡ ತಿಳಿಸಿದ್ದಾರೆ.


Share It

You May Have Missed

You cannot copy content of this page