ಬೆಂಗಳೂರು: ಬ್ಲೂ ಆರ್ಚರ್ಡ್ ಮೈಕ್ರೋಫೈನಾನ್ಸ್ ಫಂಡ್ನಿಂದ ಧನಸಹಾಯವನ್ನು ಸ್ವೀಕರಿಸಲು ನಾವು ಉತ್ಸುಕರಾಗಿದ್ದೇವೆ. ಇದು ಹಿಂದುಳಿದ ಸಮುದಾಯಗಳಲ್ಲಿ ಶಿಕ್ಷಣವನ್ನು ಪರಿವರ್ತಿಸುವ ಕಾರ್ಯವನ್ನು ಮಾಡುತ್ತದೆ ಎಂದು ವರ್ತನಾ ಕಂಪನಿ ಸಿಇಓ ಸ್ಟೀವ್ ಹಾರ್ಡ್ ಗ್ರೇವ್ ಹೇಳಿದರು.
120 ಕೋಟಿ ರೂ ಹಣ ಸಹಾಯವನ್ನು ಪಡೆದು ಮಾತನಾಡಿದ ಅವರು, ಈ ನಿಧಿಯಿಂದ ಬಡಕುಟುಂಬದ ವಿದ್ಯಾರ್ಥಿಗಳು ಹೆಚ್ಚಿನ ಸಹಾಯ ಪಡೆಯಬಹುದು.
11,000 ಕ್ಕೂ ಹೆಚ್ಚು ಖಾಸಗಿ ಶಾಲೆಗಳಿಗೆ ಕೈಗೆಟುಕುವ ಹಣಕಾಸು ಒದಗಿಸುವ ಮೂಲಕ ಮತ್ತು ಶಾಲಾ ವಿಸ್ತರಣೆ ಮತ್ತು ನವೀಕರಣಕ್ಕಾಗಿ 16,500 ಕ್ಕೂ ಹೆಚ್ಚು ಸಾಲಗಳನ್ನು ಒದಗಿಸುವ ಮೂಲಕ ‘ವರ್ತನಾ’ ನಿರ್ಣಾಯಕ ಪಾತ್ರ ವಹಿಸಿದೆ. 16 ರಾಜ್ಯಗಳು / ಕೇಂದ್ರಾಡಳಿತ ಪ್ರದೇಶಗಳು ಮತ್ತು 40 ಶಾಖೆಗಳಲ್ಲಿ ತನ್ನ ಅಸ್ತಿತ್ವದೊಂದಿಗೆ, ‘ವರ್ತನಾ’ ತನ್ನ ಸೇವೆಗಳನ್ನು ಶ್ರೇಣಿ 3 ಮತ್ತು ಶ್ರೇಣಿ 4 ನಗರಗಳಿಗೆ ವಿಸ್ತರಿಸುತ್ತಿದೆ.
ಬ್ಲೂ ಆರ್ಚರ್ಡ್ ಇನ್ವೆಸ್ಟ್ ಮೆಂಟ್ಸ್(ಸಿಂಗಾಪುರ್) ಪ್ರೈವೇಟ್ ಲಿಮಿಟೆಡ್ ಸಂಸ್ಥೆಯ ಏಷ್ಯಾ ಮುಖ್ಯಸ್ಥ ಯಾನ್ ಕಿಟ್ ಲೀ ಮಾತನಾಡಿ, ಈ ಸೌಲಭ್ಯವು ಬ್ಲೂ ಆರ್ಚರ್ಡ್ ಮತ್ತು ವರ್ತನಾ ಅವರ ಪರಸ್ಪರ ಬದ್ಧತೆಯನ್ನು ಪ್ರತಿನಿಧಿಸುತ್ತದೆ. ಜೊತೆಗೆ ಶಿಕ್ಷಣ ಕ್ಷೇತ್ರದಲ್ಲಿ ಸುಸ್ಥಿರ ಅಭಿವೃದ್ಧಿಯನ್ನು ಸಾಧಿಸುವಲ್ಲಿ ಯಶಸ್ವಿಯಾಗಲಿದೆ ಎಂದು ಹೇಳಿದರು.