ರಾಜಕೀಯ ಸುದ್ದಿ

ಮೇಲ್ಮನೆಯಲ್ಲಿ ಸೌಹಾರ್ದ ಸಹಕಾರಿ ವಿಧೇಯಕ ತಿರಸ್ಕೃತ

Share It

ವಿಧಾನಪರಿಷತ್‌: ವಿಧಾನಸಭೆಯಿಂದ ತಿದ್ದುಪಡಿಯೊಂದಿಗೆ ಅಂಗೀಕೃತಗೊಂಡಿದ್ದ ಕರ್ನಾಟಕ ಸೌಹಾರ್ದ ಸಹಕಾರಿ ತಿದ್ದುಪಡಿ ವಿಧೇಯಕ ಮೇಲ್ಮನೆಯಲ್ಲಿ ತಿರಸ್ಕೃತಗೊಂಡಿತು.

ಮುಖ್ಯಮಂತ್ರಿ ಪರವಾಗಿ ವಿಧೇಯಕವನ್ನು ಮಂಡಿಸಿ ಮಾತನಾಡಿದ ಸಚಿವ ಎಚ್‌.ಕೆ ಪಾಟೀಲ್ ಅವರು, ಅಪೆಕ್ಸ್ ಬ್ಯಾಂಕ್‌ ಅಥವಾ ಡಿಸಿಸಿ ಬ್ಯಾಂಕ್‌ಗಳಲ್ಲಿ ಶೇ.20 ಠೇವಣಿ ಇಡುವುದರಿಂದ ಸೌಹಾರ್ದ ಸಹಕಾರ ಸಂಸ್ಥೆಗಳ ಆರ್ಥಿಕ ಸ್ಥಿತಿಯನ್ನು ಕಾಪಾಡಲು ನೆರವಾಗಲಿದ್ದು, ಈ ದೆಸೆಯಲ್ಲಿ ಕೆಲವು ಬದಲಾವಣೆಗಳ ಮೂಲಕ ಸಹಕಾರ ಸಂಘಗಳ ಬಲವರ್ಧನೆಗೆ ಕರ್ನಾಟಕ ಸೌಹಾರ್ದ ಸಹಕಾರಿ ತಿದ್ದುಪಡಿ ವಿಧೇಯಕವನ್ನು ತರಲಾಗಿದೆ ಎಂದು ಹೇಳಿದರು.

ವಿಧೇಯಕದ ಬಗ್ಗೆ ಮಾತನಾಡಿದ ಸದಸ್ಯ ಡಿ.ಎಸ್‌ ಅರುಣ್ ಅವರು, ಸೌಹಾರ್ದ ಸಹಕಾರ ಸಂಘಗಳ ಸುಮಾರು 6.5 ಲಕ್ಷ ಸದಸ್ಯರು ಆಸಿ ಘೋಷಣೆ ಮಾಡಬೇಕು ಎನ್ನುವುದು ಕಷ್ಟದ ಕೆಲಸ. ಇನ್ನೂ ಸಂಘಗಳ ಲೆಕ್ಕಾಚಾರಗಳನ್ನು ವಾರ್ಷಿಕವಾಗಿ ಆಡಿಟ್ ಮಾಡಿಸುವುದು ಕಷ್ಟದ ಕೆಲಸ ಎಂದು ಹೇಳಿದರು.

ವಿರೋಧ ಪಕ್ಷದ ನಾಯಕ ಛಲವಾದಿ ನಾರಾಯಣಸ್ವಾಮಿ ಮಾತನಾಡಿ, ಅಪೆಕ್ಸ್ ಬ್ಯಾಂಕ್ ಹಾಗೂ ಡಿಸಿಸಿ ಬ್ಯಾಂಕ್‌ಗಿಂತ ಆರ್‌ಬಿಐ ಒಪ್ಪಿಗೆ ನೀಡಿದ ಬ್ಯಾಂಕ್‌ಗಳಲ್ಲಿ ಠೇವಣಿ ನೀಡಲು ಒಪ್ಪಿಗೆ ನೀಡಿದರೆ, ಠೇವಣಿದಾರರಿಗೆ ಅನಕೂಲವಾಗುತ್ತದೆ ಎಂದು ಹೇಳಿದರು. ಈ ವೇಳೆ ಸದಸ್ಯರಾದ ಸಿ.ಟಿ ರವಿ, ಎಚ್. ವಿಶ್ವನಾಥ್, ಭೋಜೆಗೌಡ, ಕೆ.ಎಸ್ ನವೀನ್ ಸೇರಿದಂತೆ ಹಲವು ನಾಯಕರು ವಿಧೇಯಕದ ಬಗ್ಗೆ ಸಲಹೆ ಸೂಚನೆ ನೀಡಿದರು.

ಸದಸ್ಯರ ಸಲಹೆ ಸೂಚನೆ ಆಲಿಸಿ ಮಾತನಾಡಿದ ಸಚಿವ ಎಚ್.ಕೆ ಪಾಟೀಲ ಅವರು, ಸಹಕಾರಿ ವಲಯದ ಹಣ ಸಹಕಾರಿ ಸಂಘಗಳಲ್ಲೇ ಇರಬೇಕು. 3,474 ಸೌಹಾರ್ದ ಸಂಘುಗಳು ಲಾಭದಲ್ಲಿದರೆ 1,282 ಸಂಘಗಳು ನಷ್ಟದಲ್ಲಿವೆ. ಸಂಘಗಳಲ್ಲಿ ಅವ್ಯವಹಾರ ಆದಲ್ಲಿ ಸದಸ್ಯರು ಆಸ್ತಿ ಘೋಷಣೆ ಮಾಡಬೇಕಲ್ಲವೇ ಹಾಗೂ ಅವ್ಯವಹಾರ ತಪ್ಪಿಸಲು ಸರ್ಕಾರವೇ ನೇಮಿಸಿದ ಅಧಿಕಾರಿಯಿಂದ ಆಡಿಟ್ ಮಾಡಿಸಲಾಗುತ್ತದೆ. ಸುಮಾರು ವರ್ಷಗಳಿಂದ ಆಗುತ್ತಿರುವ ಅವ್ಯವಹಾರ ತಪ್ಪಿಸಲು, ಸಹಕಾರ ಸಂಘಗಳ ವಿಶ್ವಾರ್ಹತೆ ಮತ್ತು ಹೊಣೆಗಾರಿಕೆಯನ್ನು ಹೆಚ್ಚಿಸಲು ಈ ವಿಧೇಯಕವನ್ನು ತಂದಿದ್ದು, ಮಂಡನೆಗೆ ಸದಸ್ಯರು ಬೆಂಬಲಿಸಬೇಕೆಂದು ಹೇಳಿದರು.

ಇದಕ್ಕೆ ಆಕ್ಷೇಪ ವ್ಯಕ್ತಪಡಿಸಿದ ವಿರೋಧ ಪಕ್ಷದ ನಾಯಕ ಛಲವಾದಿ ನಾರಯಣಸ್ವಾಮಿ ಅವರು, ಸಚಿವರು ಸದಸ್ಯರ ಸಲಹೆಯನ್ನು ಸ್ವೀಕರಿಸಿಲ್ಲ. ಇದಕ್ಕಾಗಿ ವಿಧೇಯಕವನ್ನು ಮತಕ್ಕೆ ಹಾಕಬೇಕೆಂದರು, ಆಗ ಸಭಾವತಿ ಬಸವರಾಜ ಹೊರಟ್ಟಿ ಅವರು. ‘ವಿಧೇಯಕವನ್ನು ಮತಕ್ಕೆ ಹಾಕಿದರು.

3 ಮತಗಳಿಂದ ವಿಧೇಯಕ ತಿರಸ್ಕಾರ

ವಿಧೇಯಕವನ್ನು ಮತಕ್ಕೆ ಹಾಕಿದಾಗ ಆಡಳಿತ ಪಕ್ಷದ ಪರ 23 ಸದಸ್ಯರು ವಿಧೇಯಕ ಪರವಾಗಿ ಮತ್ತು ವಿಧೇಯಕದ ವಿರೋಧವಾಗಿ ವಿರೋಧ ಪಕ್ಷದ 26 ಮತ ಹಾಕಿದರು. 3 ಮತಗಳಿಂದ ವಿಧೇಯಕ ತಿಸ್ಕಾರಗೊಂಡಿತ್ತು.

ಕೋಟ್

ನಿಮ್ಮ ಸಲಹೆಗಳನ್ನು ಆಲಿಸಿದರೂ ಕೂಡಾ ಕಾರಣ ಇಲ್ಲದೇ ವಿಧೇಯಕವನ್ನು ಮತಕ್ಕೆ ಹಾಕಿದ್ದು, ವಿಧಾನ ಪರಿಷತ್‌ನಲ್ಲಿ ಕಪ್ಪು ಚುಕ್ಕೆಯಾಗಿದೆ. ವಿಪಕ್ಷಗಳು ನಿಮ್ಮ ಅತ್ಮಸಾಕ್ಷಿಗೆ ಅನುಗುಣವಾಗಿ ನಡೆದುಕೊಳ್ಳಿ, ರಾಜಕಾರಣ ಮಾಡುವುದು ಸರಿಯಲ್ಲ.

ಎಚ್.ಕೆ ಪಾಟೀಲ, ಸಚಿವ


Share It

You cannot copy content of this page