ಬೆಂಗಳೂರು : ಜಯನಗರ ಶಾಸಕ ಸಿ.ಕೆ. ರಾಂಊರ್ತಿ ನೇತ್ರತ್ವದಲ್ಲಿ ನಡೆಯುತ್ತಿದ್ದ ಧರ್ಮಸ್ಥಳ ಛಲೋ ಧರ್ಮಯಾತ್ರೆಯ ವೇಳೆ ಭೀಕರ ಅಪಘಾತ ಸಂಭವಿಸಿದ್ದು, ಓರ್ವ ಪಾದಚಾರಿ ಸ್ಥಳದಲ್ಲಿಯೇ ಮೃತಪಟ್ಟಿದ್ದಾರೆ.
ಧರ್ಮಸ್ತಳದ ಬಗ್ಗೆ ಅಪಪ್ರಚಾರ ಖಂಡಿಸಿ, ಸೂತ್ರಧಾರಿಗಳನ್ನು ಕೂಡಲೇ ಬಂಧಿಸಬೇಕೆಂದು ಆಗ್ರಹಿಸಿ ಜಯನಗರದಿಂದ 400 ಕಾರುಗಳಲ್ಲಿ ಶಾಸಕ ಸಿ. ಕೆ. ರಾಮಮೂರ್ತಿ ಹಾಗೂ ಬೆಂಗಲಿಗರು ಧರ್ಮಯಾತ್ರೆ ಹೊರಟಿದ್ದರು. ಈ ಮಧ್ಯೆ ‘ಧರ್ಮಸ್ಥಳ ಚಲೋ’ ಕಾರ್ ರ್‍ಯಾಲಿ ವೇಳೆ ಭೀಕರ ಅಪಘಾತ ಸಂಭವಿಸಿದ್ದು, ಓರ್ವ ಪಾದಚಾರಿ ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ.

ಕಾರಿನಲ್ಲಿ ಶಾಸಕ ಸಿ.ಕೆ ರಾಮಮೂರ್ತಿ ಸಹೋದರ ಮುರಳಿ ಹೋಗುತ್ತಿದ್ದ KA -05-NJ-2449 ನಂಬರಿನ ಕಾರು ಕುಣಿಗಲ್ನ ಯಡಿಯೂರು ಸಿದ್ಧ ಲಿಂಗೇಶ್ವರ ದೇವಸ್ಥಾನ ಬಳಿ ಅಪಘಾತಕ್ಕೀಡಾಗಿದ್ದು, ಪರಿಣಾಮ ಗಂಭೀರ ಗಾಯಗೊಂಡಿದ್ದ ಪಾದಚಾರಿ ಮೃತಪಟ್ಟಿದ್ದಾರೆ ಎನ್ನಲಾಗಿದೆ.
ವಿಷಯ ತಿಳಿಯುತ್ತಿದ್ದಂತೆ ಸ್ಥಳಕ್ಕೆ ಕುಣಿಗಲ್ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಮತ್ತಷ್ಟು ಮಂದಿಗೆ ಗಾಯಗಳಾಗಿದ್ದು, ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು ಕಾರನ್ನು ವಶಕ್ಕೆ ಪಡೆದಿದ್ದಾರೆ ಎನ್ನಲಾಗಿದೆ.