ರಾಜ್ಯದಲ್ಲಿ ಇನ್ನೂ ಮೂರು ನಗರಸಭೆಗಳು ಅಸ್ತಿತ್ವಕ್ಕೆ :
ಬೆಂಗಳೂರು:ಬೆಳಗಾವಿ ಜಿಲ್ಲೆಯ ಹಾಲಿ ಸವದತ್ತಿ ಯಲ್ಲಮ್ಮಾ ಪುರಸಭೆಯಿಂದ ನಗರಸಭೆಯನ್ನು ರಚಿಸಿ “ಸವದತ್ತಿ ಯಲ್ಲಮ್ಮ ನಗರಸಭೆ” ಪ್ರದೇಶವೆಂದು ಉದ್ಘೋಷಿಸಲು ಸಚಿವ ಸಂಪುಟ ನಿರ್ಣಯಿಸಿದೆ.
ಗುರುವಾರ ಬೆಂಗಳೂರಿನಲ್ಲಿ ನಡೆದ ಸಚಿವ ಸಂಪುಟದ ಸಭೆಯಲ್ಲಿ ಈ ಮಹತ್ವದ ನಿರ್ಧಾರ ತೆಗೆದುಕೊಳ್ಳಲಾಗಿದೆ.
ಅದರಂತೆ ವಿಜಯಪುರ ಜಿಲ್ಲೆಯ ಸಿಂದಗಿ ಪುರಸಭೆಯಿಂದ ನಗರಸಭೆಯನ್ನು ರಚಿಸಿ “ಸಿಂದಗಿ ನಗರಸಭೆ” ಪ್ರದೇಶವೆಂದು ಉದ್ಘೋಷಿಸಲು” ಸಚಿವ ಸಂಪುಟ ನಿರ್ಣಯಿಸಿದೆ.
ಜೊತೆಗೆ ಬೀದರ್ ಜಿಲ್ಲೆಯ ಹಾಲಿ ಹುಮನಾಬಾದ್ ಪುರಸಭೆಯಿಂದ ನಗರಸಭೆಯನ್ನು ರಚಿಸಿ “ಹುಮನಾಬಾದ್ ನಗರಸಭೆ” ಪ್ರದೇಶವೆಂದು ಉದ್ಘೋಷಿಸಲು” ಸಚಿವ ಸಂಪುಟ ನಿರ್ಣಯಿಸಿದೆ.

