ಕಾಸರಗೋಡು: ತಂದೆಯೇ ಬಾಲಕಿ ಮೇಲೆ ಆ್ಯಸಿಡ್ ದಾಳಿ ನಡೆಸಿರುವ ಘಟನೆ ಕಾಸರಗೋಡು ಜಿಲ್ಲೆಯ ಪನತ್ತಡಿ ಗ್ರಾಮದಲ್ಲಿ ನಡೆದಿದೆ.
ಘಟನೆ ಸಂಬAಧ ರಾಜಪುರಂ ಪೊಲೀಸರು ಆರೋಪಿ, ಕರ್ನಾಟಕದ ದಕ್ಷಿಣ ಕನ್ನಡ ನಿವಾಸಿ ಮನೋಜ್ ಕೆ.ಸಿ (೪೮) ಎಂಬಾತನ ಮೇಲೆ ಪ್ರಕರಣ ದಾಖಲಿಸಿದ್ದಾರೆ. ಆರೋಪಿ ತಲೆ ಮರೆಸಿಕೊಂಡಿದ್ದು ಆತನ ಬಂಧನಕ್ಕೆ ಪೊಲೀಸರು ಬಲೆ ಬೀಸಿದ್ದಾರೆ.
ಶುಕ್ರವಾರ ರಾತ್ರಿ ೧೦.೩೦ರ ವೇಳೆಗೆ ಘಟನೆ ನಡೆದಿದ್ದು, ಪನತ್ತಡಿ ಗ್ರಾಮದ ಪಾರಕಡವು ಎಂಬಲ್ಲಿರುವ ಆರೋಪಿಯ ಹೆಂಡತಿಯ ಸಹೋದರನ ಮನೆಯಲ್ಲಿ ಪ್ರಕರಣ ಘಟಿಸಿದೆ.
ಮನೋಜ್ ಹಾಗೂ ಪತ್ನಿ ನಡುವಿನ ವೈವಾಹಿಕ ಸಂಬAಧ ಹಳಸಿತ್ತು. ಆಗಾಗ್ಗೆ ನಡೆಯುತ್ತಿದ್ದ ಜಗಳದಿಂದ ಬೇಸತ್ತು ಮನೆ ತೊರೆದಿದ್ದ ಪತ್ನಿ, ತನ್ನ ಸಹೋದರನ ಮನೆಯಲ್ಲಿ ವಾಸವಾಗಿದ್ದರು.
ಶುಕ್ರವಾರ ಮನೋಜ್ನ ೧೭ ವರ್ಷದ ಮಗಳು ತನ್ನ ೧೦ ವರ್ಷದ ಸೋದರ ಸಂಬAಧಿಯೊAದಿಗೆ ಮನೆಯಂಗಳದಲ್ಲಿ ಆಟವಾಡುತ್ತಿದ್ದಳು. ಈ ವೇಳೆ ರಬ್ಬರ್ ಶೀಟುಗಳ ಸಂಸ್ಕರಣೆಗೆ ತಂದಿದ್ದ ಆ್ಯಸಿಡ್ ಅನ್ನು ಬಾಲಕಿಯರ ಮೇಲೆ ಸುರಿದು, ಪಲಾಯನ ಮಾಡಿದ್ದಾನೆ ಎಂದು ಪೊಲೀಸರು ತಿಳಿಸಿದ್ದಾರೆ.
ದಾಳಿಯಿಂದ ಮನೋಜ್ನ ಮಗಳ ಕೈ ಹಾಗೂ ತೊಡೆಗೆ ಸುಟ್ಟಗಾಯಗಳಾಗಿವೆ. ಆಕೆಯ ಸೋದರ ಸಂಬAಧಿಯ ಮುಖ ಹಾಗೂ ಕೈಗಳಲ್ಲಿ ಸುಟ್ಟಗಾಯಗಳಾಗಿವೆ ಎಂದು ಎಫ್ಐಆರ್ನಲ್ಲಿ ಉಲ್ಲೇಖಿಸಲಾಗಿದೆ.
ಸಂತ್ರಸ್ತ ಬಾಲಕಿಯರನ್ನು ಕೂಡಲೇ ಸ್ಥಳೀಯ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗಿದೆ.