ಜಮ್ಮು ಮತ್ತು ಕಾಶ್ಮೀರ: 370 ನೇ ವಿಧಿ ಮರುಸ್ಥಾಪಿಸುವ ನಿರ್ಣಯಕ್ಕೆ ಅಂಗೀಕಾರ

IMG-20241106-WA0020
Share It

ಶ್ರೀನಗರ: ಬಿಜೆಪಿ ಸದಸ್ಯರ ಪ್ರತಿಭಟನೆಯ ನಡುವೆಯೇ ಜಮ್ಮು ಮತ್ತು ಕಾಶ್ಮೀರ ವಿಧಾನಸಭೆಯು ಬುಧವಾರ ಸಂವಿಧಾನದ 370 ನೇ ವಿಧಿಯನ್ನು ಮರುಸ್ಥಾಪಿಸುವ ನಿರ್ಣಯವನ್ನು ಅಂಗೀಕರಿಸಿದೆ.
ಜಮ್ಮು-ಕಾಶ್ಮೀರ ಸದನ ಸಭೆಯ ನಂತರ ಸಿಎಂ ಸುರೀಂದರ್ ಸಿಂಗ್ ಚೌಧರಿ ಅವರು ಸಂವಿಧಾನ ಪರಿಚ್ಛೇದ 370 ಮರುಸ್ಥಾಪನೆ ಕುರಿತು ನಿರ್ಣಯವನ್ನು ಮಂಡಿಸಿದರು.

ಜಮ್ಮು-ಕಾಶ್ಮೀರಕ್ಕೆ ವಿಶೇಷ ಸ್ಥಾನಮಾನ, ಸಾಂವಿಧಾನಿಕ ಖಾತರಿಯನ್ನು ಮರುಸ್ಥಾಪಿಸಲು ಮತ್ತು ಈ ನಿಬಂಧನೆಗಳನ್ನು ಮರುಸ್ಥಾಪಿಸಲು ಸಾಂವಿಧಾನಿಕ ಕಾರ್ಯವಿಧಾನಗಳನ್ನು ತರಲು ಚುನಾಯಿತ ಪ್ರತಿನಿಧಿಗಳೊಂದಿಗೆ ಸಂವಾದವನ್ನು ಪ್ರಾರಂಭಿಸಲು ಸರ್ಕಾರವನ್ನು ಒತ್ತಾಯಿಸುತ್ತದೆ.
ಜಮ್ಮು-ಕಾಶ್ಮೀರಕ್ಕೆ ವಿಶೇಷ ಸ್ಥಾನಮಾನ ಮರುಸ್ಥಾಪನೆಗಾಗಿ ಯಾವುದೇ ಪ್ರಕ್ರಿಯೆಯು ರಾಷ್ಟ್ರೀಯ ಏಕತೆ ಮತ್ತು ಜಮ್ಮು ಮತ್ತು ಕಾಶ್ಮೀರದ ಜನರ ಕಾನೂನುಬದ್ಧ ಆಕಾಂಕ್ಷೆಗಳನ್ನು ರಕ್ಷಿಸಬೇಕು ಎಂದು ಅದು ಹೇಳಿದೆ.

ಉಪ ಮುಖ್ಯಮಂತ್ರಿ ಅವರು ನಿರ್ಣಯ ಮಂಡಿಸುತ್ತಿದ್ದಂತೆಯೇ ಬಿಜೆಪಿ ಸದಸ್ಯರು ತಮ್ಮ ಕುರ್ಚಿಯಿಂದ ಎದ್ದು ನಿಂತು ನಿರ್ಣಯವನ್ನು ಮಂಡಿಸುವುದನ್ನು ವಿರೋಧಿಸಿದರು. ಇದು ಈ ದಿನದ ಕಲಾಪ ಭಾಗವಲ್ಲ ಎಂದು ಅವರು ಹೇಳಿದರು.

ಬಿಜೆಪಿ ಸದಸ್ಯರ ನಿರಂತರ ಪ್ರತಿಭಟನೆ ನಡುವೆ, ಸ್ಪೀಕರ್ ಅಬ್ದುರ್ ರಹೀಮ್ ರಾಥರ್ ಬಿಜೆಪಿ ನಾಯಕರೊಬ್ಬರಿಗೆ ಈ ವಿಷಯದ ಬಗ್ಗೆ ಮಾತನಾಡಲು ಹೇಳಿದರು. ಆದರೆ, ಬಿಜೆಪಿ ಸದಸ್ಯರು ಧರಣಿ ಹಾಗೂ ಘೋಷಣೆಗಳನ್ನು ಮುಂದುವರಿಸಿದರು.

ಪ್ರತಿಭಟನೆ ನಡುವೆಯೇ ಸಭಾಧ್ಯಕ್ಷರು, ನೀವು ಮಾತನಾಡಲು ಬಯಸದಿದ್ದರೆ ಮತಕ್ಕೆ ಹಾಕುತ್ತೇನೆ ಎಂದರು. ಬಿಜೆಪಿ ಸದಸ್ಯರ ಪ್ರತಿಭಟನೆ ಮುಂದುವರಿದಾಗ ಸ್ಪೀಕರ್ ನಿರ್ಣಯವನ್ನು ಮತಕ್ಕೆ ಹಾಕಿದರು. ಬಿಜೆಪಿ ಪ್ರತಿಭಟನೆ ಮತ್ತು ಘೋಷಣೆಗಳ ನಡುವೆಯೇ ಸದನದಲ್ಲಿ ನಿರ್ಣಯ ಅಂಗೀಕರಿಸಲಾಯಿತು.

ನಿರ್ಣಯ ಅಂಗೀಕರಿಸಿದ ನಂತರ ಸ್ಪೀಕರ್ ಸದನವನ್ನು 15 ನಿಮಿಷಗಳ ಕಾಲ ಮುಂದೂಡಿದರು.
ಆಗಸ್ಟ್ 15, 2019 ರಂದು ಕೇಂದ್ರ ಸರ್ಕಾರವು ಸಂವಿಧಾನ ವಿಧಿ 370 ಮತ್ತು 35ಎಯನ್ನು ರದ್ದುಗೊಳಿಸಿತು. ಹಿಂದಿನ ಜಮ್ಮು ಮತ್ತು ಕಾಶ್ಮೀರ ರಾಜ್ಯವನ್ನು ಎರಡು ಕೇಂದ್ರಾಡಳಿತ ಪ್ರದೇಶಗಳಾಗಿ ವಿಭಜಿಸಿತು.

ಇತ್ತೀಚೆಗೆ ನಡೆದ ವಿಧಾನಸಭೆ ಚುನಾವಣೆಗೂ ಮುನ್ನ ನ್ಯಾಷನಲ್ ಕಾನ್ಸರೆನ್ಸ್ (ಎನ್‌ಸಿ) ಪಕ್ಷವು ತನ್ನ ಪ್ರಣಾಳಿಕೆಯಲ್ಲಿ ಜಮ್ಮು ಮತ್ತು ಕಾಶ್ಮೀರಕ್ಕೆ ಮತ್ತೆ ರಾಜ್ಯದ ಸ್ಥಾನಮಾನ ನೀಡುವುದು ಮತ್ತು ಸಂವಿಧಾನದ 370ನೇ ವಿಧಿ ಅಡಿ ನೀಡಲಾಗಿದ್ದ ವಿಶೇಷ ಸ್ಥಾನಮಾನ ಮರುಸ್ಥಾಪನೆ ಸೇರಿ 12 ಭರವಸೆಗಳನ್ನು ನೀಡಿತ್ತು.


Share It

You cannot copy content of this page