ಅಪರಾಧ ಸುದ್ದಿ

ಚಾಮುಂಡಿ ಬೆಟ್ಟ ಚಲೋ: ಬಿಜೆಪಿ ಮುಖಂಡರು ಪೊಲೀಸರ ಅರೆಸ್ಟ್ !

Share It


ಮೈಸೂರು: ಬಾನು ಮುಷ್ತಾಕ್ ಅವರನ್ನು ದಸರಾ ಉದ್ಘಾಟಿಸಲು ಆಹ್ವಾನಿಸಿರುವುದನ್ನು ವಿರೋಧಿಸಿ ಹಿಂದೂ ಜಾಗರಣ ವೇದಿಕೆ ಮಂಗಳವಾರ ಆಯೋಜಿಸಿರುವ ಚಾಮುಂಡಿ ಬೆಟ್ಟ ಚಲೋಗೆ ಬೆಂಬಲಿಸಿ ಆಗಮಿಸಿದ ಶಾಸಕ ಟಿ.ಎಸ್.ಶ್ರೀವತ್ಸ ಸಹಿತ ಬಿಜೆಪಿ ಮುಖಂಡರನ್ನು ಪೊಲೀಸರು ಬಂಧಿಸಿದರು.

ಕುರುಬಾರಹಳ್ಳಿಯ ಸಂಗೊಳ್ಳಿ ರಾಯಣ್ಣ ವೃತ್ತಕ್ಕೆ ಆಗಮಿಸಿದ ಶಾಸಕರು ಪೊಲೀಸರ ನಡೆಗೆ ಆಕ್ರೋಶ ವ್ಯಕ್ತಪಡಿಸಿದರು. ಯಾವುದೇ ಸೆಕ್ಷನ್ ಹಾಕದಿದ್ದರೂ ರಸ್ತೆ ಬದಿಯಲ್ಲಿದ್ದವರನ್ನು ಏಕೆ ಬಂಧಿಸುತ್ತಿದ್ದೀರಿ ಎಂದು ಪ್ರಶ್ನಿಸಿದರು.

ಬಿಜೆಪಿ ನಗರಾಧ್ಯಕ್ಷ ಎಲ್.ನಾಗೇಂದ್ರ, ಸಂದೇಶ್ ಸ್ವಾಮಿ, ಸುಶ್ರುತ್ ಗೌಡ ಸೇರಿದಂತೆ ಮುಖಂಡರು ಹಾಗೂ ಮಹಿಳಾ ಕಾರ್ಯಕರ್ತರನ್ನು ಮುಂಜಾಗ್ರತಾ ಕ್ರಮವಾಗಿ ಪೊಲೀಸರು ವಶಕ್ಕೆ ಪಡೆದಿದ್ದಾರೆ. ಸಿವಿಲ್, ನಗರ ಸಶಸ್ತ್ರ ಪಡೆ, ಕಮಾಂಡೋ ದಳ, ಚಾಮುಂಡಿ ಪಡೆಯ ಸುಮಾರು ೫೦೦ ಪೊಲೀಸರನ್ನು ನಿಯೋಜಿಸಲಾಗಿದೆ.


Share It

You cannot copy content of this page