ಬೆಂಗಳೂರು: 2025-25 ನೇ ಸಾಲಿನ ಸರ್ಕಾರಿ ಪ್ರಾಥಮಿಕ ಶಾಲಾ ಶಿಕ್ಷಕ ವೃಂದ ಹಾಗೂ ಮುಖ್ಯೋಪಾಧ್ಯಯರು, ಸರ್ಕಾರಿ ಪ್ರೌಢಶಾಲಾ ಸಹ ಶಿಕ್ಷಕರು, ದೈಹಿಕ ಶಿಕ್ಷಣ ಶಿಕ್ಷಕರು, ವಿಶೇಷ ಶಿಕ್ಷಕರು, ಸರ್ಕಾರಿ ಪ್ರೌಢ ಶಾಲಾ ಮುಖ್ಯ ಶಿಕ್ಷಕರ ಸಾಮಾನ್ಯ ವರ್ಗಾವಣೆ ಪ್ರಕ್ರಿಯೆಯ ಪರಿಷ್ಕೃತ ವೇಳಾಪಟ್ಟಿ ಬಿಡುಗಡೆಯಾಗಿದೆ.
ಇಂದು ಪ್ರಾಥಮಿಕ ಮತ್ತು ಪ್ರೌಢ ಶಾಲಾ ಶಿಕ್ಷಕರ ಕೌನ್ಸಿಲಿಂಗ್ಗೆ ಆರ್ಹ ಖಾಲಿ ಹುದ್ದೆಗಳ ಪಟ್ಟಿ ಪ್ರಕಟಣೆಯಾಗಲಿದೆ. ಸೆ.೧೧ರಿಂದ ಪ್ರಾಥಮಿಕ ಶಾಲಾ ಶಿಕ್ಷಕರ ಸಮರ್ಪಕ ಮರುಹೊಂದಾಣಿಕೆ ಕೌನ್ಸಿಲಿಂಗ್ ಬ್ಲಾಕ್ ಹಂತ, ಸೆ.೧೨ ರಂದು ಪ್ರೌಢ ಶಾಲಾ ಶಿಕ್ಷಕರ ಬ್ಲಾಕ್ ಹಂತದ ಸಮರ್ಪಕ ಮರುಹೊಂದಾಣಿಕೆ ಕೌನ್ಸಿಲಿಂಗ್ ನಡೆಯಲಿದೆ.
ನಿರ್ದಿಷ್ಟಪಡಿಸಿದ ಮತ್ತು ತಾಂತ್ರಿಕ ಸಹಾಯಕರ ಹುದ್ದೆಗಳಲ್ಲಿ ಕಾರ್ಯನಿರ್ವಹಿಸುತ್ತಿರುವ ಶಿಕ್ಷಕರ ವರ್ಗಾವಣೆಯ ಅಂತಿಮ ಜೇಷ್ಠತಾ ಪಟ್ಟಿ ಸೆ.೧೬ರಂದು ಪ್ರಕಟಗೊಳ್ಳಲಿದೆ. ಕೌನ್ಸಿಲಿಂಗ್ಗೆ ಅರ್ಹ ಖಾಲಿ ಹುದ್ದೆಗಳ ಪ್ರಕಟಣೆ ಸೆ. ೧೭ಕ್ಕೆ ಪ್ರಕಟಗೊಳ್ಳಲಿದೆ. ಸ್ಥಳ ನಿಯುಕ್ತಿ ಪ್ರಕ್ರಿಯೆ ಸೆ.೧೮ರಂದು ಮತ್ತು ಪ್ರೌಢ ಶಾಲಾ ಮುಖ್ಯ ಶಿಕ್ಷಕರ ಹುದ್ದೆಯ ಸ್ಥಳ ನಿಯುಕ್ತಿ ಸೆ.೧೯ಕ್ಕೆ ನಡೆಯಲಿದೆ.
ಸಾಮಾನ್ಯ ಕೋರಿಕೆ, ಪರಸ್ಪರ ವರ್ಗಾವಣೆಗಳ ಸ್ಥಳ ನಿಯುಕ್ತಿಗೆ ಶಿಕ್ಷಕರುಗಳ ಅಂತಿಮ ಜೇಷ್ಠತಾ ಪಟ್ಟಿ ಸೆ. ೨೦ ರಂದು ಪ್ರಕಟಗೊಳ್ಳಲಿದೆ. ವರ್ಗಾವಣೆ ಕೌನ್ಸಿಲಿಂಗ್ಗೆ ಅರ್ಹ ಖಾಲಿ ಹುದ್ದೆಗಳ ಪ್ರಕಟಣೆ ಸೆ. ೨೨ ರಂದು ನಡೆಯಲಿದೆ.
ಜಿಲ್ಲೆ ಒಳಗೆ ವರ್ಗಾವಣೆ ಪ್ರಕ್ರಿಯೆಗಳು ಸೆ. ೨೩ರಿಂದ ಅಕ್ಟೋಬರ್ ೩ರವರೆಗೆ ವಿಭಾಗದ ಒಳಗಿನ ವಿಭಾಗೀಯ ಹಂತದ ವರ್ಗಾವಣೆ ಪ್ರಕ್ರಿಯೆಗಳು ಅ. ೩ ರಿಂದ ಅ. ೧೬ರವರೆಗೆ, ಅಂತರ್ ವಿಭಾಗೀಯ ವರ್ಗಾವಣೆಗಳು ಅ. ೧೬ ರಿಂದ ಅ.೩೦ರವರೆಗೆ ನಡೆಯಲಿದೆ.
ಶಾಲಾ ಶಿಕ್ಷಕರ ವರ್ಗಾವಣೆ: ಪರಿಷ್ಕೃತ ವೇಳಾಪಟ್ಟಿ ಬಿಡುಗಡೆ

