ಸುದ್ದಿ

ಮೈಸೂರು ದಸರಾ ಉದ್ಘಾಟಿಸಿದ ಲೇಖಕಿ ಬಾನು ಮುಷ್ತಾಕ್ !

Share It

ಮೈಸೂರು: ಚಾಮುಂಡಿ ಬೆಟ್ಟದಲ್ಲಿ ಚಾಮುಂಡೇಶ್ವರಿ ಉತ್ಸವಮೂರ್ತಿಗೆ ದೀಪ ಬೆಳಗಿ ಪುಷ್ಪಾರ್ಚನೆ ಮಾಡುವ ಮೂಲಕ ಲೇಖಕಿ ಬಾನು ಮುಸ್ತಾಕ್ ನಾಡಹಬ್ಬ ಮೈಸೂರು ದಸರಾವನ್ನು ಉದ್ಘಾಟಿಸಿದರು.

ಈ ಮೂಲಕ 11 ದಿನಗಳ ಮೈಸೂರು ದಸರಾ ಕಾರ್ಯಕ್ರಮಗಳಿಗೆ ಅಧಿಕೃತವಾಗಿ ಚಾಲನೆ ದೊರಕಿತು. ವಿಶೇಷವಾಗಿ ಹಸಿರು ಕುಪ್ಪಸ, ಹಳದಿ ಸೀರೆಯಲ್ಲಿ ಬಾನು ಮುಸ್ತಾಕ್ ಚಾಮುಂಡೇಶ್ವರಿ ದೇವಿ ದರ್ಶನ ಪಡೆದು ನಾಡಹಬ್ಬ ಮೈಸೂರು ದಸರಾ- ೨೦೨೫ ಅನ್ನು ಉದ್ಘಾಟಿಸಿದರು.

ಇದಕ್ಕೂ ಮುನ್ನ ಸಿಎಂ, ಉಸ್ತುವಾರಿ ಸಚಿವರು, ಜಿಲ್ಲಾಡಳಿತದ ತಂಡದೊಂದಿಗೆ ಬಾನು ಮುಷ್ಕಾಕ್ ಪೊಲೀಸ್ ಭದ್ರತೆಯೊಂದಿಗೆ ಚಾಮುಂಡಿ ಬೆಟ್ಟಕ್ಕೆ ಆಗಮಿಸಿದರು. ಅವರ ಕುಟುಂಬಸ್ಥರು ಪ್ರತ್ಯೇಕ ಬಸ್‌ನಲ್ಲಿ ಆಗಮಿಸಿದರು. ಸಚಿವರು, ಸ್ಥಳೀಯ ಶಾಸಕರು ಭಾಗವಹಿಸಿದ್ದರು.


Share It

You cannot copy content of this page