ಬೆಂಗಳೂರು: RSS ವಿರುದ್ಧ ಸಮರ ಸಾರಿರುವ ಪ್ರಿಯಾಂಕ ಖರ್ಗೆ, ಇನ್ಮುಂದೆ ಸರಕಾರಿ ನೌಕರರು RSS ಕಾರ್ಯಕ್ರಮದಲ್ಲಿ ಭಾಗವಹಿಸದಂತೆ ಕ್ರಮ ತೆಗೆದುಕೊಳ್ಳಲು ಸಿಎಂ ಸಿದ್ದರಾಮಯ್ಯ ಅವರಿಗೆ ಪತ್ರ ಬರೆದಿದ್ದಾರೆ.
ಈಗಾಗಲೇ ಸರಕಾರಿ ನೌಕರರಿಗೆ ನಾಗರಿಕ ಸೇವಾ ನಡೆತೆಗಳ ನಿಯಮಗಳು 2021 ರಡಿ ಕೆಳಕಂಡ ನಿಯಮ ಜಾರಿಯಲ್ಲಿದೆ. ಯಾವುದೇ ಸರಕಾರಿ ನೌಕರರು ರಾಜಕೀಯ ಪಕ್ಷದ ಅಥವಾ ಯಾವುದೇ ರಾಜಕೀಯ ಸಂಘಟನೆಯ ಜತೆ ನೇರವಾಗಿ ಅಥವಾ ಪರೋಕವಾಗಿ ಭಾಗವಹಿಸುವಂತಿಲ್ಲ ಎಂಬ ನಿಯಮವಿದೆ. ಹೀಗಾಗಿ, RSS ಸಂಘಟನೆಯಲ್ಲಿ ಸರಕಾರಿ ನೌಕರರು ಭಾಗವಹಿಸದಂತೆ ಕ್ರಮ ತೆಗೆದುಕೊಳ್ಳಬೇಕು ಎಂದು ವಿವರಿಸಿದ್ದಾರೆ.
ಸಂಘ ಹಾಗು ಅದರ ಅಂಗಸಂಸ್ಥೆಗಳು ಹಮ್ಮಿಕೊಳ್ಳುವ ಕಾರ್ಯಕ್ರಮದಲ್ಲಿ ಸರಕಾರಿ ನೌಕರರು ಭಾಗವಹಿಸದಂತೆ ಸೂಚನೆ ನೀಡಬೇಕು. ನಿಯಮ ಉಲ್ಲಂಘಿಸಿದರೆ, ಅಂಥವರ ವಿರುದ್ಧ ಶಿಸ್ತು ಕ್ರಮ ಜರುಗಿಸಬೇಕು ಎಂದು ಪ್ರಿಯಾಂಕ್ ಖರ್ಗೆ ಮನವಿ ಮಾಡಿದ್ದಾರೆ.