ಬೆಂಗಳೂರು: ಹಾಸನಾಂಭ ಫಿಲ್ಮ್ ಫೆಸ್ಟಿವಲ್ ಮೊದಲ ಬಾರಿಗೆ ಆಯೋಜನೆಗೊಂಡಿದ್ದು, ಮುಂದಿನ ದಿನಗಳಲ್ಲಿ ಮತ್ತಷ್ಟು ವಿಜೃಂಭಣೆಯಿಂದ ನಡೆಯಲಿದೆ ಎಂದು ರಾಜ್ಯ ಕಾರ್ಯನಿರತ ಪತ್ರಕರ್ತರ ಸಂಘದ ಅಧ್ಯಕ್ಷ ಶಿವಾನಂದ ತಗಡೂರು ಹಾರೈಸಿದರು.
ಹಾಸನಾಂಭ ಜಾತ್ರಾ ಮಹೋತ್ಸವದ ಅಂಗವಾಗಿ ಆಯೋಜಿಸಿರುವ ಹಾಸನಾಂಭ ಫಿಲ್ಮ್ ಫೆಸ್ಟಿವಲ್ ಸಮಾರೋಪ ಸಮಾರಂಭದಲ್ಲಿ ಮಾತನಾಡಿದ ಅವರು, ಹಾಸನ ಅನೇಕ ಕಲೆಗಳ ತವರೂರು, ಅನೇಕ ಕಲಾವಿದರು ಇಲ್ಲಿಂದಲೇ ಸೃಷ್ಟಿಯಾಗಿ ಹೋಗಿದ್ದಾರೆ. ಈ ಫಿಲ್ಮ್ ಫೆಸ್ಟಿವಲ್ ನಿಂದ ಮತ್ತಷ್ಟು ಕಲಾವಿದರು ಸೃಷ್ಟಿಯಾಗಲಿದ್ದಾರೆ ಎಂದರು.
ಆಯ್ಕೆಯಾದ ಸಿನಿಮಾ ನಿರ್ದೇಶಕರಿಗೆ ಬಹುಮಾನ ವಿತರಣೆ ಮಾಡಲಾಯಿತು. ಬೆಸ್ಟ್ ಪೋಸ್ಟರ್ ಬಹುಮಾನವನ್ನು ‘ಬೂಮರಾಂಗ್” ಗೆ ದೊರೆಯಿತು. ಬೆಸ್ಟ್ ಕಲರ್ ಗ್ರೀಡಿಂಗ್ ಅವಾರ್ಡ್ ಖಾಸಗಿ ಕನಸಿನ ಕಾಗದಕ್ಕೆ ದೊರೆಯಿತು. ಬೆಸ್ಟ್ ಸೌಂಡ್ ಮಿಕ್ಸಿಂಗ್ ಅವಾರ್ಡ್ ಖಾಸಗಿ ಕನಸಿನ ಕಾಗದಕ್ಕೆ ದೊರೆಯಿತು. ಅತ್ಯುತ್ತಮ ಕಲಾ ನಿರ್ದೇಶನ ಅವಾರ್ಡ್ ಕೂಡ ಖಾಸಗಿ ಕನಸಿನ ಕಾಗದಕ್ಕೆ ದೊರೆಯಿತು.
ಅತ್ಯುತ್ತಮ ಕತೆಗೆ ಶರಾವತಿ ಸಾಂಗತ್ಯ ಸಿನಿಮಾಗೆ ಅವಾರ್ಡ್ ದೊರೆಯಿತು. ಅತ್ಯತ್ತಮ ಬರವಣಿಗೆಗೆ ಶರತ್ ಮತ್ತು ಶರಧಿಯ ಜಗದೀಶ್ ಅವರಿಗೆ ಬಹುಮಾನ ದೊರೆಯಿತು. ಅತ್ಯುತ್ತಮ ಚಿತ್ರಕತೆಗೆ ‘ಸ್ಪಿರಿಟ್ ಆಪ್ ದ ಟೈಗರ್’ ಡ್ಯಾಕ್ಯುಮೆಂಟರಿಗೆ ಪ್ರಶಸ್ತಿ ದೊರೆಯಿತು.
ನಿರ್ಮಾಪಕರಾದ ಹೋಯ್ಸಳ ಕೊಣನೂರು, ನಟಿ ನಿಸರ್ಗಾ, ನಮ್ಮ ಹಾಸನ ಟಿವಿ ಮುಖ್ಯಸ್ಥರಾದ ತೌಫಿಕ್ ಅಹಮದ್, ಸಂಗೀತ ನಿರ್ದೇಶಕ ಶಕೀಲ್ ಅಹಮದ್ ಹಾಸನ, ಭೀಮ್ ಆರ್ಮಿ ಚನ್ನರಾಯಪಟ್ಟಣ ತಾಲ್ಲೂಕು ಅಧ್ಯಕ್ಷ ಮಂಜುನಾಥ್ ಹಿರೀಬಿಳ್ತಿ, ನಿರ್ಮಾಪಕರಾದ ಗುರುಪ್ರಸಾದ್ ಸೇರಿ ಅನೇಕ ಗಣ್ಯರು ಭಾಗವಹಿಸಿದ್ದರು.