ಇನ್ಸೂರೆನ್ಸ್ ಹಣಕ್ಕಾಗಿ ಸಹೋದರನ ಕೊಲೆ

Murder
Share It

ಬೆಳಗಾವಿ : ಮೂಡಲಗಿ ತಾಲೂಕು ಕಲ್ಲೋಳ್ಳಿ ಗ್ರಾಮದಲ್ಲಿ ಭೀಕರ ಕೊಲೆ ಬೆಳಕಿಗೆ ಬಂದಿದೆ.
ಹನುಮಂತ ಗೋಪಾಲ ತಳವಾರ (35) ಭೀಕರ ಕೊಲೆಯಾದವ. ಬಸವರಾಜ ತಳವಾತ ಇತರ ಸ್ನೇಹಿತರೊಂದಿಗೆ ಅಣ್ಣನನ್ನು ಕೊಲೆ ಮಾಡಿದ್ದಾನೆ.

ಕೊಲೆಗೆ ಕಾರಣ ಏನು? ಹನುಮಂತನ ಹೆಸರಿನಲ್ಲಿ 50 ಲಕ್ಷ ರೂಪಾಯಿ ಇನ್ಸೂರೆನ್ಸ್ ಮಾಡಲಾಗಿದೆ. ಈ ಹನುಮಂತನ ಹೆಸರಿನಲ್ಲಿದ್ದ ಇನ್ಸೂರೆನ್ಸ್ ಗೆ ಬಸವರಾಜ ನಾಮಿನಿ ಹಾಕಿದ್ದ. ಅಣ್ಣ ಸತ್ತರೆ ಅದರ ಲಾಭ ನನಗೆ ಸಿಗಬಹುದು ಎಂದು ಭಾವಿಸಿ ತನ್ನ ಸ್ನೇಹಿತರ ಜೊತೆ ಸೇರಿ ಕಂಠಪೂರ್ತಿ ಕುಡಿದು ಅಣ್ಣನನ್ನು ಹತ್ಯೆ ಮಾಡಿದ್ದಾನೆ. ಶ್ರೀಗಂಧದ ಕಟ್ಟಿಗೆಗಳು ಇವೆ, ಅದನ್ನು ತರಲು ಹೋಗೋಣ ಬಾ ಎಂದು ಕರೆದುಕೊಂಡು ಹೋಗಿದ್ದಾನೆ.

ಆಗ ಹನುಮಂತನ ತಲೆಗೆ ರಾಡಿನಿಂದ ಹೊಡೆದು ಕೊಲೆ ಮಾಡಿರುವುದು ಪೋಲಿಸ್ ತನಿಖೆ ವೇಳೆ ಬಯಲಾಗಿದೆ. ಬಸವರಾಜ ತಳವಾರ, ಬಾಪು ಶೇಕ್, ಈರಪ್ಪ ಹಡಗಿನಾಳ, ಸಚಿವ ಕಂಠೇನವರ, ಆರೋಪಿಗಳು. ಮೂಡಲಗಿ ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸುತ್ತಿದ್ದಾರೆ.


Share It

You cannot copy content of this page