ಸುಪ್ರೀಂ ನ್ಯಾಯಮೂರ್ತಿ ಮೇಲೆ ಶೂ ಎಸೆತ: ಆರೋಪಿಗೆ ದೆಹಲಿಯಲ್ಲಿ ಚಪ್ಪಲಿಯಿಂದ ಥಳಿತ
ನವದೆಹಲಿ: ಸುಪ್ರೀಂ ಕೋರ್ಟ್ ನ ನಿರ್ಗಮಿತ ನ್ಯಾಯಮೂರ್ತಿ ಬಿ.ಆರ್. ಗವಾಯಿ ಅವರ ಮೇಲೆ ಶೂ ಎಸೆದಿದ್ದ ಆರೋಪಿ ಕಿಶೋರ್ ಶರ್ಮಾ ಮೇಲೆ ದೆಹಲಿಯಲ್ಲಿ ಚಪ್ಪಲಿಯಿಂದ ದಾಳಿ ಮಾಡಿರುವ ಘಟನೆ ನಡೆದಿದೆ.
ಈ ಸಂಬಂಧ ವಿಡಿಯೋವೊಂದು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದ್ದು, ಅದರಲ್ಲಿ ವ್ಯಕ್ತಿಯೊಬ್ಬರು ಕಿಶೋರ್ ಶರ್ಮಾ ಮೇಲೆ ವ್ಯಕ್ತಿಯೊಬ್ಬರು ಚಪ್ಪಲಿಯಿಂದ ಅನೇಕ ಬಾರಿ ದಾಳಿ ಮಾಡಿದ್ದಾರೆ. ಶರ್ಮಾ ಅದರಿಂದ ತಪ್ಪಿಸಿಕೊಳ್ಳುವ ಪ್ರಯತ್ಮ ನಡೆಸಿದ್ದು, ಮತ್ತಿಬ್ಬರು ಅವರ ಸಹಾಯಕ್ಕೆ ಬರುವ ಯತ್ನ ಮಾಡಿದರು.
ಕಿಶೋರ್ ಶರ್ಮಾ ಚಪ್ಪಲಿಯಿಂದ ಹೊಡೆಯುವ ಸಂದರ್ಭದಲ್ಲಿ ಸನಾತನ ಧರ್ಮಕ್ಕೆ ಜೈ ಎಂದು ಘೋಷಣೆ ಕೂಗಿದರು. ಈ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಬಾರಿ ವೈರಲ್ ಆಗಿದೆ. ಕರ್ಮ ಕಾಡುತ್ತಿದೆ ಎಂದು ಅನೇಕರು ಕಮೆಂಟ್ ಮಾಡಿದ್ದಾರೆ. ಸುಪ್ರೀಂ ನ್ಯಾಯಮೂರ್ತಿ ಮೇಲೆ ಶೂ ಎಸೆದಿದ್ದ ವ್ಯಕ್ತಿಗೆ ಸರಿಯಾಗಿದ್ದದ್ದೇ ಆಗಿದೆ ಎಂದು ಕೆಲವರು ಕಮೆಂಟಿಸಿದ್ದಾರೆ.
ಕಿಶೋರ್ ಶರ್ಮಾ ಪ್ರಕರಣದ ವಿಚಾರಣೆ ವೇಳೆ ಗವಾಯಿ ಅವರ ಮೇಲೆ ಶೂ ಎಸೆದಿದ್ದರು. ಸನಾತನ ಧರ್ಮದ ವಿರುದ್ಧ ಮಾತನಾಡಿದರು ಎಂದು ಆರೋಪಿಸಿ, ಶರ್ಮಾ ಶೂ ಎಸೆದಿದ್ದರು. ಇದು ದೇಶಾದ್ಯಂತ ಆಕ್ರೋಶ ವ್ಯಕ್ತವಾಗಲು ಕಾರಣವಾಗಿತ್ತು. ಆದರೆ, ಯಾವುದೇ ಪಾಶ್ಚತ್ತಾಪದ ಮಾತುಗಳನ್ನಾಡಿರಲಿಲ್ಲ.


